ಮುಷ್ಕರ ನಡೆಸಲು ಖಾಸಗಿ ಬಸ್ಸು ಮಾಲಕರ ನಿರ್ಧಾರ
Update: 2017-01-13 19:17 IST
ಕಾಸರಗೋಡು , ಜ.13 : ಪ್ರಯಾಣ ದರ ಏರಿಕೆ ಪ್ರತಿಭಟಿಸಿ ಜನವರಿ 19 ರಂದು ಮುಷ್ಕರ ನಡೆಸಲು ಖಾಸಗಿ ಬಸ್ಸು ಮಾಲಕರು ತೀರ್ಮಾನಿಸಿದ್ದಾರೆ.
ಬೇಡಿಕೆ ಈಡೇರಿಸದಿದ್ದಲ್ಲಿ ಫೆಬ್ರವರಿ ಎರಡರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸವುದಾಗಿ ಮುನ್ನೆಚ್ಚರಿಕೆ ನೀಡಿದೆ.
ಇಂಧನ ಬೆಲೆ ಏರಿಕೆಯಿಂದ ಬಸ್ಸು ಉದ್ಯಮದ ಮೇಲೆ ಪರಿಣಾಮ ಬೀರಿದ್ದು, ಕನಿಷ್ಠ ಪ್ರಯಾಣ ದರವನ್ನು ಏಳು ರೂ . ನಿಂದ ಒಂಭತ್ತು ರೂ. ಗೆ ಏರಿಕೆ ಮಾಡಬೇಕು ಎಂದು ಬಸ್ಸು ಮಾಲಕರ ಸಂಘದ ರಾಜ್ಯ ಸಮಿತಿ ಒತ್ತಾಯಿಸಿದೆ.