×
Ad

ಜೆಪ್ಪು ಮಾರ್ಕೆಟ್: ನಿವೇಶನ ರಹಿತರ ಪ್ರತಿಭಟನೆ

Update: 2017-01-13 19:24 IST

ಮಂಗಳೂರು, ಜ.13: ಮನಪಾ ವ್ಯಾಪ್ತಿಯಲ್ಲಿ ನಿವೇಶನರಹಿತರ ಸಂಘಟನೆ ಸಕ್ರಿಯವಾಗಿ ವಿವಿಧ ಹಂತದ ಪ್ರತಿಭಟನೆಗಳನ್ನು ನಡೆಸುತ್ತಿರುವಾಗಲೇ ಸರಕಾರದ ಸುತ್ತೋಲೆಯನ್ನು ಧಿಕ್ಕರಿಸಿ ಅನರ್ಹರನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಬೇಕು ಎಂದು ನಿವೇಶನರಹಿತರ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ನೀತಿನಗರ ಒತ್ತಾಯಿಸಿದ್ದಾರೆ.

ಜೆಪ್ಪು ಮಾರ್ಕೆಟ್ ಬಳಿ ಸಮಿತಿ ವತಿಯಿಂದ ನಡೆದ ಪ್ರತಿಭಟನೆಉನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಕೃಷ್ಣಪ್ಪಕೊಂಚಾಡಿ, ಯೋಗೀಶ್ ಜಪ್ಪಿನಮೊಗರು, ಪ್ರೇಮನಾಥ್ ಜಲ್ಲಿಗುಡ್ಡೆ, ನೇತ್ರಾವತಿ, ಚಂದ್ರಾವತಿ, ಯಶೋಧಾ, ರೋಹಿಣಿ, ಮಮತಾ ಪಾಲ್ಗೊಂಡಿದ್ದರು.

ನಾಗೇಶ್ ಕೊಟ್ಯಾನ್ ಸ್ವಾಗತಿಸಿದರು. ಜೆಸಿಂತ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News