ಕರಾವಳಿಯ ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಪಂಚಕ್ಕೆ ಮಾದರಿ: ಆಸ್ಕರ್
ಉಡುಪಿ, ಜ.13: ಶಿಕ್ಷಣ ಪಡೆಯುವ ಉದ್ದೇಶದಿಂದ ಪ್ರತಿವರ್ಷ ದೇಶ ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಅವಿಭಜಿತ ದ.ಕ. ಜಿಲ್ಲೆಗೆ ಆಗ ಮಿಸುತ್ತಿದ್ದು, ಈ ಮೂಲಕ ಕರಾವಳಿಯ ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಪಂಚಕ್ಕೆ ಮಾದರಿಯಾಗಿವೆ ಎಂದು ರಾಜ್ಯಸಭಾ ಸದಸ್ಯ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಶುಕ್ರವಾರ ಮಾತನಾಡುತಿದ್ದರು.
ದೇಶದಲ್ಲಿ ಇಂದು ನಾವು ವಿದ್ಯಾ ಕ್ಷೇತ್ರದಲ್ಲಿ ಇತರ ದೇಶಗಳಿ ಗಿಂತ ಎತ್ತರದ ಸ್ಥಾನದಲಿದ್ದೇವೆ. ದೇಶದ ಹಲವಾರು ಕಾಲೇಜುಗಳನ್ನು ವಿಶ್ವವಿದ್ಯಾನಿಲಯಗಳನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಕಾಲೇಜಿನ ವಾರ್ತಾ ಪತ್ರಿಕೆ ವಾಯ್ಸಿ ಆಫ್ ಮಿಲಾಗ್ರಿಸ್‌ನ್ನು ಬಿಡುಗಡೆಗೊಳಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಶೈಕ್ಷಣಿಕ ಕ್ಷೇತ್ರಕ್ಕೆ ರಾಜ್ಯ ಸರಕಾರ ಸದಾ ಬೆಂಬಲ ನೀಡುತ್ತಿದ್ದು, ಕಾಲೇಜಿಗೆ ಬರುವ ರಸ್ತೆಯನ್ನು ಸಂತೆಕಟ್ಟೆಯಿಂದ ಕಲ್ಯಾಣಪುರದವರೆಗೆ 50 ಲಕ್ಷ ರೂ. ಮತ್ತು ಕಾಲೇಜಿಗೆ ಸಂಪರ್ಕಿಸುವ ರಸ್ತೆಯನ್ನು 17ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಪದವಿ ಕಾಲೇಜಿನ ವರದಿಯನ್ನು ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ, ಪಿಯು ಕಾಲೇಜಿನ ವರದಿಯನ್ನು ಪ್ರಾಂಶುಪಾಲೆ ಸವಿತಾ ಕುಮಾರಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಮಿತಿಯ ವರದಿಯನ್ನು ಹೇಲ್ಮಾ ಪೀಕಾರ್ಡೊ, ಸುವರ್ಣ ಮಹೋತ್ಸವದ ವರದಿ ಯನ್ನು ಪ್ರೊ.ಅರ್ಚನಾ ಕೆ ದಾಬ್ಡೆ ವಾಚಿಸಿದರು.
ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ವಂ.ಮೊನ್ಸಿಂಜ್ಞೋರ್ ಬ್ಯಾಪ್ಟಿಸ್ಟ್ ಮಿನೇಜಸ್, ಕೆಥೊಲಿಕ್ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿ ವಂ. ಲೊರೆನ್ಸ್ ಡಿಸೋಜ, ಜಿಪಂ ಸದಸ್ಯ ಜನಾರ್ದನ ತೋನ್ಸೆ, ತಾಪಂ ಸದಸ್ಯ ಧನಂಜಯ ಕುಂದರ್, ಹಳೆ ವಿದ್ಯಾರ್ಥಿ ಆಲ್ಫ್ರೇಡ್ ಕ್ರಾಸ್ಟೊ, ಕ್ಯಾಂಪಸ್ ನಿರ್ದೇಶಕ ವಂ.ಡಾ ಪ್ರಕಾಶ್ ಅನಿಲ್ ಕ್ಯಾಸ್ತಲಿನೊ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರವಿಚಂದ್ರ ನಾಯಕ್, ವಿಷ್ಣುಪ್ರಸಾದ್, ಹಳೆ ವಿದ್ಯಾರ್ಥಿ ಸಂಘದ ಅಲನ್ ವಿನಯ್ ಲೂವಿಸ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ರೊಸಾಲಿಯಾ ಕಾರ್ಡೊಡ, ಜೋಯ್ಸಿ ಡಿಸೋಜ, ಬ್ಲ್ಲೊಸಂ ಫೆರ್ನಾಂಡಿಸ್, ಪಾಲನ ಮಂಡಳಿಯ ಉಪಾಧ್ಯಕ್ಷ ಡಾ.ನೇರಿ ಕರ್ನೆಲಿಯೊ, ಕಾಲೇಜು ಅಭಿವೃದ್ಧಿ ಸಮಿತಿಯ ಮೆಲ್ವಿನ್ ಸಿಕ್ವೇರಾ, ಲೆಸ್ಲಿ ಲೂವಿಸ್ ಉಪಸ್ಥಿತರಿದ್ದರು.
ಕಾಲೇಜಿನ ಸಂಚಾಲಕ ವಂ.ಸ್ಟ್ಯಾನಿ ಬಿ.ಲೋಬೊ ಸ್ವಾಗತಿಸಿದರು, ಮೆಟಿಲ್ಡಾ ಲೂವಿಸ್ ವಂದಿಸಿದರು.