ಗಾಜು ಲೇಪಿತ ಗಾಳಿಪಟ ದಾರದ ಮೇಲಿನ ಎನ್‌ಜಿಟಿ ನಿಷೇಧ ರದ್ದತಿಗೆ ಸುಪ್ರೀಂ ನಕಾರ
Update: 2017-01-13 21:41 IST
ಹೊಸದಿಲ್ಲಿ,ಜ.13: ಗಾಳಿಪಟಗಳನ್ನು ಹಾರಿಸಲು ಬಳಕೆಯಾಗುವ ಗಾಜುಲೇಪಿತ ಮಾಂಜಾ ದಾರದ ಮೇಲೆ ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ)ವು ಕಳೆದ ವರ್ಷದ ಡಿ.14ರಂದು ಹೇರಿರುವ ಮಧ್ಯಂತರ ನಿಷೇಧವನ್ನು ಹಿಂದೆಗೆದುಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ.
ಸೂಕ್ತ ಪರಿಹಾರಕ್ಕಾಗಿ ಎನ್‌ಜಿಟಿಯನ್ನೇ ಸಂಪರ್ಕಿಸುವಂತೆ ನ್ಯಾಯಾಲಯವು ಅರ್ಜಿದಾರರಾದ ಗುಜರಾತಿನ ವ್ಯಾಪಾರಿಗಳ ಗುಂಪೊಂದಕ್ಕೆ ತಿಳಿಸಿತು.
ಮಾಂಜಾ ದಾರವು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಅಪಾಯಕಾರಿಯಾಗಿರುವ ಜೊತೆಗೆ ಪರಿಸರಕ್ಕೆ ಬೆದರಿಕೆಯಾಗಿದೆ ಎಂದು ಎನ್‌ಜಿಟಿಯು ಮಧ್ಯಂತರ ನಿಷೇಧ ಹೇರುವ ಸಂದರ್ಭ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.