×
Ad

ಕೊಲೆಗೀಡಾದ ಸ್ಥಿತಿಯಲ್ಲಿ ಮಹಿಳೆ ಪತ್ತೆ

Update: 2017-01-13 22:19 IST

ಕಾಸರಗೋಡು , ಜ.13 :     ಮಹಿಳೆ ಕೊಲೆಗೀಡಾದ ಸ್ಥಿತಿಯಲ್ಲಿ  ಪತ್ತೆಯಾದ ಘಟನೆ  ಬೇಕಲ ಪೆರಿಯಾಟಡ್ಕ ದಲ್ಲಿ  ನಡೆದಿದೆ. 

ಕೊಲೆಗೀಡಾದವರನ್ನು  ದೇವಕಿ ( 65) ಎಂದು ಗುರುತಿಸಲಾಗಿದೆ.

ದೇವಕಿ  ಒಬ್ಬಂಟಿಯಾಗಿ ಈ ಮನೆಯಲ್ಲಿ ವಾಸಿಸುತ್ತಿದ್ದು , ಮಕ್ಕಳು ಸಮೀಪದ ಇನ್ನೊಂದು ಮನೆಯಲ್ಲಿ ವಾಸವಾಗಿದ್ದಾರೆ.

ಸಂಜೆ  ಪುತ್ರ ಶ್ರೀಧರ  ತಾಯಿ ಮನೆಗೆ ಬಂದಾಗ  ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.   ಬಟ್ಟೆಯಿಂದ ಕತ್ತು ಹಿಸುಕಿ ದ ಸ್ಥಿತಿಯಲ್ಲಿ  ಪತ್ತೆಯಾಗಿದೆ.  ಘಟನೆಯ ಸುದ್ದಿ ತಿಳಿದು ಬೇಕಲ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್  ವಿಶ್ವ ನಾಥ್  ನೇತೃತ್ವದ  ಪೊಲೀಸರು ಸ್ಥಳಕ್ಕಾಮಿಸಿ ತನಿಖೆ ನಡೆಸುತ್ತಿದ್ದಾರೆ.

ಬೆರಳಚ್ಚು ತಜ್ಞರು , ಶ್ವಾನ ದಳ ಸ್ಥಳಕ್ಕೆ ತಲಪಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News