ಉಜಿರೆ ವಿದ್ಯಾರ್ಥಿ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆಗೆ ಆಯ್ಕೆ
Update: 2017-01-13 22:58 IST
ಬೆಳ್ತಂಗಡಿ , ಜ.13 : ಉಜಿರೆ ಎಸ್.ಡಿ.ಎಮ್ ಪದವಿ ಕಾಲೇಜಿನ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಆದಿತ್ಯ ಶೆಟ್ಟಿ ಜ್ಞಾನ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಭಾಷಣ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಜನವರಿ 19 ಮತ್ತು 20ಕ್ಕೆ ನಡೆಯಲಿ ರುವ ಈ ಸ್ಪರ್ಧೆಯನ್ನು ನೆಹರು ಯುವ ಕೇಂದ್ರ ಸಂಘಟನೆ ಆಯೋಜಿಸಿದೆ.
ದೊಡ್ಡಬಳ್ಳಾಪುರದಲ್ಲಿ ನಡೆದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೂಲತಃ ಬ್ರಹ್ಮಾವರದವರಾದ ಆದಿತ್ಯ ಶೆಟ್ಟಿ ಜ್ಞಾನ ಅವರು ಮಾಜಿ ರೋಟರಿ ಗವರ್ನರ್ ಜ್ಞಾನ ವಸಂತ ಶೆಟ್ಟಿ ಹಾಗೂ ಅರುಂಧತಿ ಶೆಟ್ಟಿ ಅವರ ಪುತ್ರ.
ಇವರು ದೆಹಲಿಯಲ್ಲಿ ಪೇಟ್ರಿಯಾಟಿಸಂ ಆ್ಯಂಡ್ ನೇಷನ್ ಬಿಲ್ಡಿಂಗ್‌ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ. ಕಾಲೇಜ್ ಮತ್ತು ಅಂತರ್ ಕಾಲೇಜು ಮಟ್ಟದ ವಿವಿಧ ಭಾಷಣ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿರುವ ಹೆಗ್ಗಳಿಕೆ ಇವರದ್ದು.