ಉಳ್ಳಾಲ : ಜ.15ರಂದು ‘ಇನ್‌ಲ್ಯಾಂಡ್ ಇಂಪಾಲ’ ಉದ್ಘಾಟನೆ
ಮಂಗಳೂರು, ಜ. 13: ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಸಂಸ್ಥೆಯ ವತಿಯಿಂದ ನಗರದ ಅನತಿ ದೂರದ ಉಳ್ಳಾಲದಲ್ಲಿ ನಿರ್ಮಿಸಲಾದ ‘ಇನ್‌ಲ್ಯಾಂಡ್ ಇಂಪಾಲ’ ವಸತಿ ಹಾಗೂ ವಾಣಿಜ್ಯ ಸಮುಚ್ಚಯ ಜ.15ರಂದು ಸಂಜೆ 4:30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿರಜ್ ಅಹ್ಮದ್ ತಿಳಿಸಿದ್ದಾರೆ.
ಇನ್‌ಲ್ಯಾಂಡ್ ಇಂಪಾಲ ವಸತಿ ಸಮುಚ್ಚಯವನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಮತ್ತು ವಾಣಿಜ್ಯ ಮಳಿಗೆಯನ್ನು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ.ಆರ್.ಲೋಬೊ, ಮೊದಿನ್ ಬಾವ, ಯೆನೆಪೋಯ ವಿವಿಯ ಕುಲಪತಿ ವೈ.ಅಬ್ದುಲ್ಲಾ ಕುಂಞಿ, ಉಳ್ಳಾಲ ನಗರ ಸಭಾ ಅಧ್ಯಕ್ಷ ಕೆ.ಹುಸೈನ್ ಕುಂಞಿ ಮೋನು, ಕ್ರೆಡೈ ಅಧ್ಯಕ್ಷ ಡಿ.ಬಿ.ಮೆಹ್ತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉಳ್ಳಾಲದ ಸುಂದರ ಪರಿಸರದಲ್ಲಿ ಆಕರ್ಷಕ ವಿನ್ಯಾಸ, ಆಧುನಿಕ ಸೌಲಭ್ಯಗಳೊಂದಿಗೆ ಸಮುದ್ರಾಭಿಮುಖವಾಗಿ ನಿರ್ಮಾಣಗೊಂಡಿರುವ ಇಂಪಾಲ ವಸತಿ ಹಾಗೂ ವಾಣಿಜ್ಯ ಸಮುಚ್ಚಯ ಉನ್ನತ ಗುಣಮಟ್ಟದ 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆಯ 90 ಫ್ಲಾಟ್‌ಗಳನ್ನು ಹಾಗೂ 15 ವಾಣಿಜ್ಯ ಮಳಿಗೆಗಳನ್ನು ಹೊಂದಿದೆ. ವಿಶಾಲವಾದ ಕಾರು ಪಾರ್ಕಿಂಗ್, ಇಂಟರ್‌ಕಾಂ ಸೌಲಭ್ಯ, ತ್ಯಾಜ್ಯ ನೀರು ಸಂಸ್ಕರಣಾ ಘಟಕ, ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ, ಜಿಮ್, ಜನರೇಟರ್ ವ್ಯವಸ್ಥೆ, 2 ಸ್ವಯಂ ಚಾಲಿತ ಲಿಫ್ಟ್‌ಗಳನ್ನು ಒಳಗೊಂಡಿದೆ.
ಈ ಕಟ್ಟಡದ ವಿಶೇಷತೆಯೆಂದರೆ ಎಲ್ಲಾ ಅಪಾರ್ಟ್‌ಮೆಂಟ್‌ಗಳ ಬಾಲ್ಕನಿಗಳಲ್ಲಿ ಸಮುದ್ರ ತಡಿಯ ಸುಂದರ ಅಲೆಗಳ ದೃಶ್ಯಗಳು ಕಾಣ ಸಿಗುತ್ತದೆ. ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಫ್ಲಾಟ್‌ಗಳನ್ನು ಸಾಮಾನ್ಯ ಜನರಿಗೆ ಪೂರೈಸುವುದು ಹಾಗೂ ಗ್ರಾಹಕರಿಗೆ ಗರಿಷ್ಠ ಸಂತೃಪಿ ನೀಡುವುದು ಇನ್‌ಲ್ಯಾಂಡ್ ಸಂಸ್ಥೆಯ ಉದ್ದೇಶ ಹಾಗೂ ಗುರಿಯಾಗಿದೆ ಎಂದು ಸಿರಾಜ್ ಅಹ್ಮದ್ ತಿಳಿಸಿದ್ದಾರೆ.
www.inlandbuilders.netಇನ್‌ಲ್ಯಾಂಡ್ ಸಂಸ್ಥೆಯ ಅಪಾರ್ಟ್‌ಮೆಂಟ್‌ಗಳ ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗಾಗಿ ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.