ಎಪಿಎಂಸಿ ಚುನಾವಣೆ : ಮೂಡುಬಿದಿರೆಯಲ್ಲಿ ಕಾಂಗ್ರೆಸ್‌ಗೆ ಮೂರು, ಬಿಜೆಪಿಗೆ ಒಂದು ಸ್ಥಾನದಲ್ಲಿ ಗೆಲುವು
Update: 2017-01-14 17:26 IST
ಮೂಡುಬಿದಿರೆ, ಜ.14 : ಮಂಗಳೂರು ಎಪಿಎಂಸಿ ಚುನಾವಣೆಯಲ್ಲಿ ಮೂಡುಬಿದಿರೆ ಹೋಬಳಿಯ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೂರು ಸ್ಥಾನ ಹಾಗೂ ಬಿಜೆಪಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ.
ಮಾರ್ಪಾಡಿ-ಮೂಡುಬಿದಿರೆ ಕ್ಷೇತ್ರದಲ್ಲಿ ಶ್ರೀನಿವಾಸ್, ಕಲ್ಲಮುಂಡ್ಕೂರು ಕ್ಷೇತ್ರದಲ್ಲಿ ಚಂದ್ರಹಾಸ್ ಸನಿಲ್, ಶಿರ್ತಾಡಿಯಲ್ಲಿ ಪ್ರವೀಣ್ ಕುಮಾರ್ ಕಾಂಗ್ರೆಸ್ ಬೆಂಬಲಿತರಾಗಿ ಗೆಲುವು ಸಾಧಿಸಿದ್ದಾರೆ.
ಪುತ್ತಿಗೆ ಕ್ಷೇತ್ರದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಬಿಜೆಪಿ ಬೆಂಬಲದೊಂದಿಗೆ ಗೆಲುವು ಸಾಧಿಸಿದ್ದಾರೆ.