×
Ad

ಮುಲ್ಕಿ : ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

Update: 2017-01-14 18:02 IST

ಮುಲ್ಕಿ, ಜ.14: ದೈವ ದೇವರುಗಳ ಜೀರ್ಣೋದ್ಧಾರದಿಂದ ಊರಿನ ಅಭಿವೃದ್ಧಿ ಸಾಧ್ಯ.  ಇದರಿಂದ ನಮ್ಮ ಸಂಸ್ಕ್ರತಿ,  ಸಂಸ್ಕಾರಗಳನ್ನು ಉಳಿಸಿ ಬೆಳೆಸಿದಂತಾಗಿದೆ ಎಂದು ಮುಲ್ಕಿ ಸೀಮೆ ಅರಸರಾದ ದುಗ್ಗಣ ಸಾವಂತರು ಹೇಳಿದರು.

ಅವರು ಕಿನ್ನಿಗೋಳಿ ಸಮೀಪದ ಏಳಿಂಜೆ ಲಕ್ಷೀಜನಾರ್ದನ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆದ ಸಭಾಕಾರ್ಯದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಏಳಿಂಜೆ ದೇವಸ್ಥಾನ ಬಹಳ ಪ್ರಸಿದ್ಧಿ ಪಡೆದಿದ್ದು, ಇಂತಹ ಧಾರ್ಮಿಕ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದರು.

ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಆಶೀರ್ವಾಚನ ನೀಡಿದರು.

ಈ ಸಂದರ್ಭ ದೇವಳದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ, ಅನುವಂಶಿಕ ಅರ್ಚಕರಾದ ವೈ ವಿ ಗಣೇಶ್ ಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕೋಂಜಾಲಗುತ್ತು ಪ್ರಬಾಕರ ಶೆಟ್ಟಿ, ಶಿಬರೂರು ಗುತ್ತು ಗುತ್ತಿನಾರ್ ಉಮೇಶ್ ಶೆಟ್ಟಿ, ಅಂಗಡಿ ಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಕುಮಾರ್ ಬೋಳ್ಳೂರು, ತಾಲೂಕು ಪಂಚಾಯತ್ ಸದಸ್ಯೆ ರಶ್ಮಿ ಆಚಾರ್ಯ, ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ಸೀತಾರಾಮ ಶೆಟ್ಟಿ, ಏಳತ್ತೂರು ದೇವಳದ ಆಡಳಿತ ಮುಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಉಳೆಪಾಡಿ ದೇವಳದ ಆಡಳಿತ ಮುಕ್ತೇಸರ ಚಿತ್ತರಂಜನ್ ಶೆಟ್ಟಿ, ಏಳಿಂಜೆ ಜಾರಂದಾಯ ದೈವಸ್ಥಾನದ ಆಡಳಿತ ಮುಕ್ತೇಸರ ಸದಾನಂದ ಶೆಟ್ಟಿ ಬಂಡಸಾಲೆ, ಜಾರಂದಾಯ ದೈವಸ್ಥಾನ ಪಟ್ಟೆ ಆಡಳಿತ ಮುಕ್ತೇಸರ ರಘರಾಮ ಅಡ್ಯಂತಾಯ, ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ, ಅನಿಲ್ ಶೆಟ್ಟಿ ಕೋಂಜಾಲಗುತ್ತು, ಭುವನಾಭಿರಾಮ ಉಡುಪ, ಸದಾನಂದ ಟ್, ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್, ಕಿಟ್ಟಣ್ಣ ಶೆಟ್ಟಿ ಶಿಬರೂರು ಗುತ್ತು, ದೊಡ್ಡಣ್ಣ ಶೆಟ್ಟಿ, ವೈ ಕೃಷ್ಣ ಸಾಲಿಯಾನ್ ಮತ್ತಿತರರು ಇದ್ದರು.

ಯೋಗೀಶ್ ರಾವ್ ಸ್ವಾಗತಿಸಿದರು, ದೇವಳದ ಅರ್ಚಕ ಸದಾನಂದ ಟ್ ಧನ್ಯವಾದ ಸಮರ್ಪಿಸಿದರು ಶರತ್ ಶೆಟ್ಟಿ ಮತ್ತು ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News