×
Ad

ಕಾಸರಗೋಡು : ಕನ್ನಡ ಸಾಹಿತ್ಯ ಸಮ್ಮೇಳನ

Update: 2017-01-14 18:47 IST

ಕಾಸರಗೋಡು , ಜ.14 : ಜಿಲ್ಲಾ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನವು ಬಾಯಾರುಪದವಿನ ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಉದ್ಘಾಟನೆಗೊಂಡಿತು.  ಹಿರಿಯ ಸಾಹಿತಿ ಡಾ. ಉಪ್ಪಂಗಳ ರಾಮ ಭಟ್‍ರವರ ಸಮ್ಮೇಳನಾಧ್ಯಕ್ಷತೆಯಲ್ಲಿ ಹಿರಣ್ಯ ನಾರಾಯಣ ಭಟ್ಟ ವೇದಿಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಬೆಂಗಳೂರು ಸಂಸ್ಕಂತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೋ.ಮಲ್ಲೇಪುರಂ ಜಿ.ವೆಂಕಟೇಶ್ ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು  ಬೇಬಿ ಜಯರಾಂ ಸಂಗ್ರಹಿಸಿದ ಪಿ.ಎಸ್.ಸಿ ಸಾಮಾನ್ಯಜ್ಞಾನ ಪುಸ್ತಕ ವಿಜಯಶ್ರೀಯನ್ನು ಬಿಡುಗಡೆಗೊಳಿಸಿದರು.  ಕಾಸರಗೋಡು ಜಿ.ಪಂ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದರು. 

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿನೀಯರು ನಾಡಗೀತೆ ಹಾಡಿದರು. ಸಂಸ್ಥೆಯ ಸಂಚಾಲಕ ಹಿರಣ್ಯ ಮಾಹಲಿಂಗ ಭಟ್‍ ಕಾರ್ಯಕ್ರಮದ ಉದ್ಘಾಟಕ ಪ್ರೋ.ಮಲ್ಲೇಪರಂ ಜಿ.ವೆಂಕಟೇಶ ಅವರಿಗೆ ಕನ್ನಡದ ಶಾಲು ಹೊದಿಸಿ ಸ್ವಾಗತಿಸಿದರು.ಕಾರ್ಯಕ್ರಮದ ಸಂಘಟಕಾ ಸಮಿತಿ ಕಾರ್ಯಧ್ಯಕ್ಷ ರಾಮಕೃಷ್ಣ ಭಟ್ಟ ಪೆಲತ್ತಡ್ಕ ಉಪಸ್ಥಿತರಿದ್ದರು.

 ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ ಭಟ್‍ ಪ್ರಾಸ್ತಾವಿಕ  ಭಾಷಣ   ಮಾಡಿದರು.

 ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಗೌರವಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ,ಹಿರಿಯ ಸಾಹಿತಿ ರಮಾನಂದ ಬನಾರಿ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಸದಾಶಿವ ರಾವ್. ಟಿ.ಡಿ, ಜಿ.ಪಂ ಸದಸ್ಯೆ ಪುಷ್ಪಾ ಅಮೆಕ್ಕಳ, ಸಂಘಟನಾ ಸಮಿತಿ ಗೌರವಾಧ್ಯಕ್ಷ ಐ.ವಿ ಭಟ್ ಉಪಸ್ಥಿತರಿದ್ದರು. 

ಸಮ್ಮೇಳಾನಧ್ಯಕ್ಷರ ಮೆರವಣಿಗೆ

ಬಾಯಾರು ಪ್ರಾಥಮಿಕ ಆರೋಗ್ಯಕೇಂದ್ರದಿಂದ ಸಮ್ಮೇಳನ ನಗರದವರೆಗೆ ಹೊರಟ ಸಮ್ಮೇಳಾನಧ್ಯಕ್ಷರ ಪೂರ್ವಭಾವೀ ವರ್ಣರಂಜಿತ ಮೆರವಣಿಗೆಯನ್ನು ಪೈವಳಿಕೆ ಗ್ರಾ.ಪಂ ಅಧ್ಯಕ್ಷೆ ಭಾರತೀ.ಜೆ ಶೆಟ್ಟಿ ಉದ್ಘಾಟಿಸಿದರು.

ಕ.ಸಾ.ಪ ಕೇರಳ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ರಾಮಚಂದ್ರ ಭಟ್.ಪಿ ಸ್ವಾಗತಿಸಿ, ನವೀನ್‍ಚಂದ್ರ ಎಂ.ಎಸ್‍ ಧನ್ಯವಾದವಿತ್ತರು.  ಸಂಯೋಜನಾ ಸಮಿತಿ ಸದಸ್ಯ ರಾಜಾರಾಮ ರಾವ್‍ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News