×
Ad

ಕೆಲಿಂಜ ಸರ್ಕಾರಿ ಶಾಲೆಯಲ್ಲಿ ಪ್ರತಿಭಾ ಸಮಾರಂಭ

Update: 2017-01-14 19:11 IST

ಬಂಟ್ವಾಳ , ಜ.14 : ಗ್ರಾಮೀಣ ಪ್ರದೇಶದ ಕನ್ನಡ ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಮಕ್ಕಳಿಗೆ ಸಿಕ್ಕಿದಾಗ ಸಮಾಜಕ್ಕೆ ಅವರು ಮೌಲ್ಯಯುತರಾಗಿ ಸೇವೆ ಸಲ್ಲಿಸುತ್ತಾರೆ ಎಂದು ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆ ಹೇಳಿದರು. 

ಅವರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕೆಲಿಂಜ ಇದರ 2016-17ನೇ ಸಾಲಿನ ಪ್ರತಿಭಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮುಗ್ಧ ಮನಸ್ಸಿನ ಮಕ್ಕಳಿಗೆ ಯಾವುದೇ ಒತ್ತಡ ಮಾಡದೇ ಉತ್ತಮ ಶಿಕ್ಷಣ ಜೊತೆ ಸಂಸ್ಕಾರವನ್ನು ಶಿಕ್ಷಕರು ನೀಡಿದಾಗ ಅಂತಹ ಮಕ್ಕಳು ಮಾದರಿ ಮಕ್ಕಳಾಗಿ ಬೆಳೆಯುತ್ತಾರೆ ಎಂದರು. 

ಮಕ್ಕಳ ಪ್ರತಿಭೆಗಳು ಅನಾವರಣಗೊಳ್ಳಲು ಜನಪ್ರತಿನಿಧಿಗಳ ಜೊತೆ ಶಿಕ್ಷಕರ ಪಾತ್ರ ಅಷ್ಟೇ ಮುಖ್ಯ ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಕಂಭ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ ವಹಿಸಿದ್ದರು.

ವೇದಿಕೆಯಲ್ಲಿ ತಾ.ಪಂ.ಸದಸ್ಯೆ ಗೀತಾ, ನ್ಯಾಯವಾದಿ ಪುಂಡಿಕಾಯಿ ನಾರಾಯಣ ಭಟ್, ಮಾಜಿ ಎಸ್.ಡಿ.ಎಂ.ಸಿ. ಅಧ್ಯಕ್ಷ ವೆಂಕರಮಣ ಭಟ್, ಮಾಜಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಎನ್.ಈಶ್ವರ್ ಭಟ್ ನಗ್ರಿಮೂಲೆ, ಇಂಜಿನಿಯರ್ ಸಂತೋಷ್ ಕುಮಾರ್ ಶೆಟ್ಟಿ ಪೆಲತಡ್ಕ, ಉಪನ್ಯಾಸಕ ಮುರಳೀಧರ ಗೌಡ ಪಾಳ್ತಿಮಾರ್, ಸಂತೋಷ ಶೆಟ್ಟಿ ಸೀನಾಜೆ, ವೀರಕಂಭ ಅರಣ್ಯಾಧಿಕಾರಿ ಚಿದಾನಂದ, ನಿವೃತ್ತ ಮುಖ್ಯ ಶಿಕ್ಷಕಿ ಸುಶೀಲಾ, ಗ್ರಾ.ಪಂ ಸದಸ್ಯೆ ಭಾರತಿ, ಗ್ರಾ.ಪಂ.ಸದಸ್ಯ ವಿ.ಕೆ.ಅಬ್ಬಾಸ್, ನಿವೃತ್ತ ಮುಖ್ಯ ಶಿಕ್ಷಕಿ ಸುಮಿತ್ರ, ಗ್ರಾ.ಪಂ ಸದಸ್ಯ , ಗಣೇಶೊತ್ಸವ ಸಮಿತಿ ಅಧ್ಯಕ್ಷ ದೇವದಾಸ ರೈ , ಎಸ್.ಡಿ.ಎಂ.ಸಿ. ಅಧ್ಯಕ್ಷ ಹಮೀದ್ ,  ಮುಖ್ಯ ಶಿಕ್ಷಕಿ ಶಕುಂತಳಾ ಸ್ವಾಗತಿಸಿದರು, ಮಂಜುಳಾ ವಂದಿಸಿದರು. ರವೀಂದ್ರ.ಕೆ ಕಾರ್ಯಕ್ರಮ ನಿರೂಪಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News