ಸಂಶೋಧನೆಗಳ ಫಲಿತಾಂಶಗಳು ಮಾರುಕಟ್ಟೆಗೆ ಪರಿಚಯವಾಗಬೇಕು: ಡಾ.ರಮಾನಂದ ಶೆಟ್ಟಿ

Update: 2017-01-14 13:59 GMT

ಕೊಣಾಜೆ , ಜ.14 : ಸಂಶೋಧನೆಗಳಿಂದ ಸಿಕ್ಕ ಫಲಿತಾಂಶದ ಆಧಾರದಲ್ಲಿ ಮಾರುಕಟ್ಟೆಗೆ ಪರಿಚಯಿಸಿದಾಗ ಸಂಶೋಧನೆಗಳು ಫಲಪ್ರದವಾಗಲು ಸಾಧ್ಯ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಯಸ್. ರಮಾನಂದ ಶೆಟ್ಟಿ ಹೇಳಿದರು.
   

ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಜೈವಿಕ ರಕ್ಷಣೆಗಳ ಸಮಿತಿ ಸಂಸ್ಥೆ ದೇರಳಕಟ್ಟೆ ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ವಿಂಶತಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ ಜೈವಿಕ ಸಂಪತ್ತು ರಕ್ಷಣೆಗಳ ಮಾರ್ಗಸೂಚಿ ಮತ್ತು ಆರೋಗ್ಯ ರಕ್ಷ ಣೆ ಹಾಗೂ ಸಂಶೋಧನೆ ಕುರಿತ ಅಭ್ಯಾಸಗಳ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಆವರು ಮಾತನಾಡಿದರು.

ನಿಟ್ಟೆ ವಿಶ್ವವಿದ್ಯಾಲಯ ಮಾನವೀಯತೆ, ಸಮಾಜಸೇವೆ ಹಾಗೂ ಕಲೆಗಳ ಆಧಾರದಲ್ಲಿ ಶಿಕ್ಷಣವನ್ನು ಒದಗಿಸುತ್ತಿದ್ದು ಸಂಶೋಧನೆಗಳಿಗೆ ಬೇಕಾದ ಸಾಧನಗಳನ್ನು ಬಲವರ್ಧನೆಗೊಳಿಸಿದೆ. ಅದರಿಂದಾಗಿ ಕ್ಯಾನ್ಸರ್ ಕುರಿತಾದ ಸಂಶೋಧನೆ, ಸ್ಟೆರ್ಮಸೆಲ್, ನರವಿಜ್ಞಾನಕ್ಕೆ ಸಮಬಂಧಿಸಿದ ಸಂಶೋಧನೆಗಳು ಮುನ್ನಡೆದಿದೆ. ಸಂಶೋಧನೆಗಳು ಕೇವಲ ಮ್ಯಾಗಜಿನ್‌ಗಳಿಗೆ ಸೀಮಿತವಾಗಿಸರಿಸದೆ ಅದರ ಫಲಿತಾಂಶಗಳಿಂದ ಸಂಶೋಧನಾ ಫಲಿತಾಂಶವನ್ನು ಮಾರುಕಟ್ಟೆಗೆ ತಲುಪಿಸುವ ಮೂಲಕ ಸಾರ್ವಜನಿಕರಿಗೆ ಸಿಗುವಂತೆ ಮಾಡಬೇಕಿದೆ ಎಂದು ನುಡಿದರು.

ಕಾರ್ಯಗಾರದಲ್ಲಿ ನಿಟ್ಟೆ ವಿ.ವಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕಿ ಡಾ. ಇಂದ್ರಾಣಿ ಕರುಣಾಸಾಗರ್ , ನಿಟ್ಟೆ ಫಾರ್ಮಸಿಯ ಪ್ರಾಂಶುಪಾಲ ಡಾ.ಸಿಯಸ್ ಶಾಸ್ತ್ರಿ, ಮಂಗಳೂರು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ.ಲಕ್ಷ್ಮೀ ಕಾಂತ್ , ಬೆಂಗಳೂರು ಕೃಷಿ ವಿಜ್ಞಾನ ವಿಶ್ವವವಿದ್ಯಾನಿಲಯದ ಡಾ.ವೀಣಾ.ಯಸ್. ಅನಿಲ್, ಜೈವಿಕರಕ್ಷಣೆ ಅಧಿಕಾರಿ ಮೇಜರ್ ಡಾ.ಶಿವಕುಮಾರ್ ಹಿರೇಮಠ್, ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸೂಕ್ಷ್ಮ ಜೀವವಿಜ್ಞಾನದ ವಿಭಾಗ ಮುಖ್ಯಸ್ಥ ಡಾ.ಕಿರಣ್ ಚಾವ್ಲಾ ಮೊದಲಾದವರು ಉಪಸ್ಥಿತರಿದ್ದರು.

ನಿಟ್ಟೆ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ ಸ್ವಾಗತಿಸಿದರು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News