ತ್ರಿವರ್ಣ ಧ್ವಜದ ಮ್ಯಾಟ್ ಬಳಿಕ ಗಾಂಧೀಜಿ ಚಿತ್ರದ ಚಪ್ಪಲಿ ಮಾರುತ್ತಿರುವ ಅಮೆಝಾನ್‌ !

Update: 2017-01-14 14:26 GMT

ಹೊಸದಿಲ್ಲಿ, ಜ.14: ಭಾರತದ ತ್ರಿವರ್ಣ ಧ್ವಜ ಮಾದರಿಯ ಕಾಲೊರಸು ಮಾರಾಟಕ್ಕಿಟ್ಟು ವಿವಾದ ಸೃಷ್ಠಿಸಿದ್ದ ಅಮೆಝಾನ್   ಸಂಸ್ಥೆ ಇದೀಗ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಚಿತ್ರವಿರುವ ಚಪ್ಪಲಿಯನ್ನು ಮಾರಾಟಕ್ಕಿಟ್ಟಿದೆ.
ಆನ್‌ಲೈನ್ ಮಾರಾಟ ಸಂಸ್ಥೆ ಅಮೆಝಾನ್ ಡಾಟ್ ಕಾಂ ಶಾಪಿಂಗ್ ಪೋರ್ಟಲ್‌ನಲ್ಲಿ ಗಾಂಧೀಜಿ ಚಿತ್ರವಿರುವ ಚಪ್ಪಲಿ ಲಭ್ಯವಿದ್ದು, ಇದರ ಬೆಲೆ 16.99 ಡಾಲರ್.ಇದರೊಂದಿಗೆ ಅಮೆಝಾನ್ ಇನ್ನೊಮ್ಮೆ ವಿವಾದದಲ್ಲಿ ಸಿಲುಕಿಕೊಂಡಿದೆ.
  ಕಳೆದ ವಾರ ‘ಅಮೆಝಾನ್ ’ಕೆನಡಾದಲ್ಲಿ ತ್ರಿವರ್ಣ ಧ್ವಜ ಮಾದರಿಯ ಕಾಲೊರಸು (ಡೋರ್ ಮ್ಯಾಟ್) ಮಾರಾಟಕ್ಕಿಟ್ಟಿದ್ದಕ್ಕೆ ಭಾರತೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತ್ರಿವರ್ಣ ಧ್ವಜ ಮಾದರಿಯ ಕಾಲೊರಸು (ಡೋರ್ ಮ್ಯಾಟ್) ಮಾರಾಟಕ್ಕಿಟ್ಟ ‘ಅಮೆಝಾನ್ ಕೆನಡಾ’ ಸಂಸ್ಥೆ ಕ್ಷಮೆ ಯಾಚಿಸಬೇಕು ಇಲ್ಲವಾದರೆ ಅಮೆಝಾನ್ ಕೆನಡಾ ಸಂಸ್ಥೆಯ  ಅಧಿಕಾರಿಗಳ ವೀಸಾ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.

,,,,,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News