×
Ad

ಕಣಚೂರು ಆಸ್ಪತ್ರೆಯಲ್ಲಿ ನೆಪ್ರೊ-ಯುರೋಲಜಿ ವಿಭಾಗ ಉದ್ಘಾಟನೆ

Update: 2017-01-14 20:02 IST

ಮಂಗಳೂರು, ಜ.14: ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ನೆಪ್ರೊ-ಯುರೋಲಜಿ ವಿಭಾಗವನ್ನು ಕಣಚೂರು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಆಸ್ಪತ್ರೆಯ ಡೀನ್ ಡಾ. ಎಚ್.ಎಸ್.ವಿರೂಪಾಕ್ಷ ಉದ್ಘಾಟಿಸಿದರು.

ಸಂಸ್ಥೆಯ ಅಧ್ಯಕ್ಷ ಹಾಜಿ ಯು.ಕೆ.ಮೋನು ಅಧ್ಯಕ್ಷತೆ ವಹಿಸಿದ್ದರು.

ವೈದ್ಯಕೀಯ ವಿಭಾಗದ ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್, ವೈದ್ಯಕೀಯ ವಿಭಾಗದ ಅಧೀಕ್ಷಕ ಡಾ. ದೇವಿಪ್ರಸಾದ್ ಶೆಟ್ಟಿ, ಕಣಚೂರು ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲ ಸುಹೈಲ್ ಖಾನ್ ಉಪಸ್ಥಿತರಿದ್ದರು.

ಚಿಕಿತ್ಸೆ ಬಯಸುವ ಕಿಡ್ನಿ ಸಂಬಂಧಿ ರೋಗಿಗಳಿಗೆ ಡಾ. ಪ್ರಶಾಂತ್ ಕೆ. ಮತ್ತು ಡಾ. ಮುಹಮ್ಮದ್ ಸಲೀಂ ಲಭ್ಯರಿದ್ದು, ಮಾಹಿತಿಗಾಗಿ ಆಸ್ಪತ್ರೆ (ದೂ.ಸಂ: 0824-2888000)ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News