ಸಿರಿಯದಲ್ಲಿ ರಾಸಾಯನಿಕ ದಾಳಿ ನಡೆಸಿದವರ ಪಟ್ಟಿಯಲ್ಲಿ ಅಸದ್

Update: 2017-01-14 16:38 GMT

ಡಮಾಸ್ಕಸ್, ಜ. 14: ಸಿರಿಯ ಸಂಘರ್ಷದಲ್ಲಿ ರಾಸಾಯನಿಕ ಅಸ್ತ್ರಗಳ ಬಳಕೆಗೆ ಅಧ್ಯಕ್ಷ ಬಶರ್ಅಸದ್ ಮತ್ತು ಅವರ ಸಹೋದರ ಜವಾಬ್ದಾರರು ಎಂಬುದಾಗಿ ತಾವು ಶಂಕಿಸಿದ್ದೇವೆ ಎಂದು ಅಂತಾರಾಷ್ಟ್ರೀಯ ತನಿಖಾಧಿಕಾರಿಗಳು ಮೊದಲ ಬಾರಿಗೆ ಹೇಳಿದ್ದಾರೆ.

ವಿಶ್ವಸಂಸ್ಥೆ ಮತ್ತು ಜಾಗತಿಕ ಕಾವಲು ಸಂಸ್ಥೆ ‘ರಾಸಾಯನಿಕ ಅಸ್ತ್ರಗಳ ನಿಷೇಧಕ್ಕಾಗಿನ ಸಂಘಟನೆ (ಒಪಿಸಿಡಬ್ಲು)ಗಳಿಗಾಗಿ ನಡೆಸಲಾದ ಜಂಟಿ ತನಿಖೆಯು ಈ ಮೊದಲು ಸೇನಾ ಘಟಕಗಳನ್ನಷ್ಟೇ ಜವಾಬ್ದಾರಿಯನ್ನಾಗಿಸಿತ್ತು ಹಾಗೂ ಯಾವುದೇ ಸೇನಾಧಿಕಾರಿ ಅಥವಾ ಅಧಿಕಾರಿಗಳ ಹೆಸರನ್ನು ಅದು ಹೇಳಿರಲಿಲ್ಲ.

ಈಗ ತನಿಖಾಧಿಕಾರಿಗಳು 2014-15ರಲ್ಲಿ ಸರಣಿ ಕ್ಲೋರಿನ್ ಬಾಂಬ್ ದಾಳಿಗಳನ್ನು ನಡೆಸಿದ್ದಾರೆನ್ನಲಾದ ವ್ಯಕ್ತಿಗಳನ್ನೊಳಗೊಂಡ ಪಟ್ಟಿಯನ್ನು ತಯಾರಿಸಲಾಗಿದೆ.

ಈ ಪಟ್ಟಿಯಲ್ಲಿ ಅಸದ್, ಅವರ ತಮ್ಮ ಮಹರ್ ಹಾಗೂ ಇತರ ಉನ್ನದ ದರ್ಜೆಯ ಅಧಿಕಾರಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News