ವಿಜಯಾ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನ ಸ್ಪರ್ಧೆ

Update: 2017-01-14 16:59 GMT

ಮುಲ್ಕಿ , ಜ.14 :  ಆಧುನಿಕ ಯುಗದಲ್ಲಿ ಪ್ರತೀ ಹೆಜ್ಜೆಯಲ್ಲಿಯೂ ಸ್ಪರ್ಧೆ ಎದುರಿಸಬೇಕಾಗಿದ್ದು , ವಿದ್ಯಾರ್ಥಿಗಳು ಸೋಲನ್ನು ಗೆಲುವಿನ ಹಾದಿಯ ಮೆಟ್ಟಿಲು ಎಂದು ತಿಳಿಯುವುದು ಅಗತ್ಯ ಎಂದು ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆಂನ್ಸ್ ಅಧಿಕಾರಿ ತಿವಿಕ್ರಮ್ ಪೈ ಹೇಳಿದರು.

ಮುಲ್ಕಿ ವಿಜಯಾ ಕಾಲೇಜಿನ ಕಂಪ್ಯೂಟರ್ ವಿಭಾಗದ ಆಶ್ರಯದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ನಡೆದ ಮಾಹಿತಿ ತಂತ್ರಜ್ಞಾನ ಸ್ಪರ್ಧೆ ‘ವಿಜ್‌ಐಟಿ ಟೆಕ್‌ಫಾರ್ಮರ್ಸ್‌-2017’ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ,ಉದ್ಯೋಗ, ವ್ಯವಹಾರ, ಸಮಾಜ ಕ್ಷೇತ್ರಗಳಲ್ಲಿ ಸ್ಪರ್ಧೆಯನ್ನು ಪ್ರತೀಕ್ಷಣವೂ ಎದುರಿಸುವ ಅನಿರ್ವಾರ್ಯ ಸ್ಥಿತಿ ಸಾಧಕ ವ್ಯಕ್ತಿಗಳದ್ದಾಗಿದ್ದು , ವಿದ್ಯಾರ್ಥಿಗಳು ಗೆಲುವಿಗೆ ಬೀಗದೆ ಸೋಲಿಗೆ ಹೆದರದೆ ಗುರಿ ಸಾಧನೆಯ ಛಲ ಮುಂದಿಟ್ಟುಕೊಂಡು ಸಾಧಕರಾಗಬೇಕು ಎಂದು ಕರೆನೀಡಿದರು.

ಉತ್ತಮ ಸಂಸ್ಕಾರ ಪೂರ್ಣ ಯುವ ಜನತೆಗೆ ವಿಶ್ವಮಟ್ಟದಲ್ಲಿ ಅವಕಾಶಗಳಿವೆ. ನಮ್ಮ ದೇಶ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಪಾರಮ್ಯತೆಯನ್ನು ಸಾಧಿಸುವ ಉದ್ದೇಶದಿಂದ ಡಿಜಿಟಲ್ ಇಂಡಿಯಾ ಯೋಜನೆ ಪ್ರಾರಂಭಿಸಿರುವುದಕ್ಕೆ ಪೂರಕವಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಐಟಿ ಸ್ಪರ್ಧೆ ಆಯೋಜಿಸಿರುವುದು ಬಹಳ ಉತ್ತಮ ಕಾರ್ಯ ಎಂದರು.

 ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷೆ ಶಮಿನಾ ಆಳ್ವಾ ಅಧ್ಯಕ್ಷತೆ ವಹಿಸಿದ್ದರು.

ವಿಜಯಾ ಕಾಲೇಜು ಪ್ರಾಂಶುಪಾಲ ಡಾ.ಕೆ. ನಾರಾಯಣ ಪೂಜಾರಿ, ಕಂಪ್ಯೂಟರ್ ವಿಭಾಗ ಮುಖ್ಯಸ್ಥೆ ಜ್ಯೋತಿ ಶಂಕರ್ ಸಾಲ್ಯಾನ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಅನಸೂಯಾ ಕರ್ಕೇರಾ, ಕಂಪ್ಯೂಟರ್ ವಿಭಾಗ ಕಾರ್ಯದರ್ಶಿ ಮಾನಸ ಎನ್.ಸುವರ್ಣ ಅತಿಥಿಗಳಾಗಿದ್ದರು.

ಜ್ಯೋತಿ ಶಂಕರ್ ಸಾಲ್ಯಾನ್ ಸ್ವಾಗತಿಸಿದರು.

ಪೃಥ್ವಿ ಪಿ.ಶೆಟ್ಟಿ ಪರಿಚಯಿಸಿದರು. ಡಾ.ನಾರಾಯಣ ಪೂಜಾರಿ ದಿಕ್ಸೂಚಿ ಮಾತುಗಳನ್ನಾಡಿದರು. ಸಾನಿಯಾ ಅಸಾದಿ ಮತ್ತು ಸೌಮ್ಯಾ ಶೆಣೈ ನಿರೂಪಿಸಿದರು. ಮಾನಸ.ಎನ್.ಸುವರ್ಣ ವಂದಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News