ಉಡುಪಿ : ಎಪಿಎಂಸಿ ಚುನಾವಣೆ ವಿಜೇತರು
ಉಡುಪಿ, ಜ.14: ಜಿಲ್ಲೆಯ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ನಡೆದ ಚುನಾವಣೆಯ ಮತಗಳ ಎಣಿಕೆ ಇಂದು ಆಯಾ ತಾಲೂಕು ಕೇಂದ್ರಗಳಲ್ಲಿ ಶಾಂತಿಯುತವಾಗಿ ನಡೆದಿದ್ದು, ವಿಜೇತರ ಹೆಸರುಗಳನ್ನು ಘೋಷಿಸಲಾಗಿದೆ.
ಉಡುಪಿ ತಾಲೂಕಿನ 111ಮತಗಟ್ಟೆಗಳ, ಕುಂದಾಪುರ ತಾಲೂಕಿನ 34 ಹಾಗೂ ಕಾರ್ಕಳ ತಾಲೂಕಿನ 74 ಮತಗಟ್ಟೆಗಳ ಮತಗಳ ಎಣಿಕೆ ಇಂದು ನಡೆಯಿತು.
ವಿಜೇತ ವಿವರ ಹೀಗಿದೆ:
ಉಡುಪಿ ತಾಲೂಕು ಎಪಿಎಂಸಿ: 1.ಕೋಟ ಕ್ಷೇತ್ರ- ಕೃಷ್ಣ ಪೂಜಾರಿ ಪಿ.(ಪಡೆದ ಮತಗಳ ಸಂಖ್ಯೆ 1523), 3.ಮಂದಾರ್ತಿ- ಸತೀಶ್ ಶೆಟ್ಟಿ (1185), 4.ಬ್ರಹ್ಮಾವರ-ಕೆ.ಶ್ಯಾಮಪ್ರಸಾದ್(916), 5.ಕಲ್ಯಾಣಪುರ- ಬ್ಯಾಪ್ಟಿಸ್ಟ್ ಡಾಯಸ್(1082), 6.ಪೆರ್ಡೂರು-ವನಮಾಲ ಶೆಟ್ಟಿ (953), 7.ಉಡುಪಿ-ಲತಾ ಎಸ್.ಶೆಟ್ಟಿ (915), 8.ಮಣಿಪಾಲ- ರಾಘವೇಂದ್ರ ನಾಯ್ಕಿ (1050), 9.ಕಾಪು-ಗುರುಪ್ರಸಾದ್ ಜಿ.ಎಸ್.(1067), 10.ಶಿರ್ವ- ಕಿರಣ್‌ಕುಮಾರ್ (1022), 11.ಪಡುಬಿದ್ರಿ- ನವೀನಚಂದ್ರ ಸುವರ್ಣ (1039).
ಕುಂದಾಪುರ ತಾಲೂಕು:1.ಶಿರೂರು-ವೆಂಕಟಪೂಜಾರಿ ಸಸಿಹಿತ್ಲು (1609), 2.ಕಂಬದಕೋಣೆ-ವಸಂತ ಹೆಗ್ಡೆ (1014), 3.ಕಿರಿಮಂಜೇಶ್ವರ- ಮಂಜು ದೇವಾಡಿಗ(981), 4.ತ್ರಾಸಿ- ಶರತಕುಮಾರ್ ಶೆಟ್ಟಿ ಬಾಳಿಕೆರೆ (1381), 5. ವಂಡ್ಸೆ-ಸಂಜೀವ ಪೂಜಾರಿ(1516), ಎಪಿಎಂಸಿ ಕುಂದಾಪುರ ವರ್ತಕರ ಕ್ಷೇತ್ರ- ಡಿ.ರಾಮರಾಯ ಕಾಮತ್ (73).
ಕಾರ್ಕಳ ತಾಲೂಕು: 1.ಹೆಬ್ರಿ-ಎಚ್.ಸಂಜೀವ ನಾಯ್ಕಿ (983), 2.ವರಂಗ- ಸತೀಶ ಶೆಟ್ಟಿ ಮುಟ್ಲುಪಾಡಿ(1153), 3.ಅಜೆಕಾರು- ರತ್ನಾಕರ ಅಮೀನ್ (1078), 4.ಕುಕ್ಕುಂದೂರು- ಜಯರಾಮ ಆಚಾರಿ (755), 5.ಬೈಲೂರು- ಸುಮನ ಬಿ.(644), 6.ಕಾರ್ಕಳ ಕಸಬಾ- ಜೆರಾಲ್ ಜೂಡ್ ಡಿಸಿಲ್ವ (834), 7.ಬಜಗೋಳಿ- ಜಯವರ್ಮ ಜೈನ್ (777), 8.ನಲ್ಲೂರು- ನಾರಾಯಣ ಪೂಜಾರಿ(799), 9.ನಿಟ್ಟೆ- ಸಿ.ಆನಂದ ಬಂಡಿಮಠ (694), 10.ಬೆಳ್ಮಣ್-ಮೋಹನದಾಸ ಶೆಟ್ಟಿ ಎನ್.(579), 11.ಮುಂಡ್ಕೂರು-ವಸಂತಿ ಎಂ.ಮೂಲ್ಯ(528).
ಜಿಲ್ಲೆಯ ಉಳಿದ ಸ್ಥಾನಗಳಿಗೆ ಅವಿರೋಧ ಆಯ್ಕೆಗಳು ನಡೆದಿವೆ.