×
Ad

ಮುಲ್ಕಿ : ಸರಕಾರಿ ಶಾಲೆಯ ರಜತ ಮಹೋತ್ಸವ ಸಮಾರಂಭ

Update: 2017-01-14 23:34 IST

ಮುಲ್ಕಿ, ಜ.14: ಆಂಗ್ಲ ಮಾಧ್ಯಮ ಶಾಲೆಯ ಬಗ್ಗೆ ವ್ಯಾಮೋಹದ ಮಧ್ಯೆಯೂ ವಿದ್ಯಾರ್ಥಿಗಳ ಹೆತ್ತವರ ಕನ್ನಡ ಅಭಿಮಾನದ ಫಲವಾಗಿ ಕೆ.ಎಸ್. ರಾವ್ ನಗರದ ಸರಕಾರಿ ಕನ್ನಡ ಶಾಲೆಯಲ್ಲಿ ಸುಮಾರು 800 ವಿದ್ಯಾರ್ಥಿಗಳು ಕಲಿಯುತ್ತದ್ದಾರೆ ಎಂದು ಶಾಸಕ ಕೆ. ಅಭಯಚಂದ್ರ ಜ್ಯೆನ್ ಹೇಳಿದರು.

 ಕೆ.ಎಸ್. ರಾವ್ ನಗರದ ದ.ಕ.ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಶಾಲೆಯ ರಜತ ಮಹೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ನೂತನ ಕಾರ್ನಾಡು ಸದಾಶಿವ ರಾವ್ ಹೊರಾಂಗಣ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶಾಲೆಗೆ ಸುಸಜ್ಜಿತ ಕ್ರೀಡಾಂಗಣದ ಅಗತ್ಯವಿದ್ದು ಮುಲ್ಕಿ ನಗರ ಪಂಚಾಯತ್‌ನ ನಗರೋತ್ತಾನ ಯೋಜನೆಯಲ್ಲಿ 10 ಲಕ್ಷ ಅನುದಾನದಲ್ಲಿ ಸುಸಜ್ಜಿತ ಕ್ರೀಡಾಂಗಣ, ಮೂಡಾದ ಅನುದಾನದಲ್ಲಿ ಶಾಲೆಗೆ ಆವರಣ ಗೋಡೆ ಹಾಗೂ ಶಿಕ್ಷಣ ಸಚಿವರ ವಿಶೇಷ ಅನುದಾನದಲ್ಲಿ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ಮೇಲ್ಛಾವಣೆ ದುರಸ್ತಿ ಹಾಗೂ ನೆಲಕ್ಕೆ ಟ್ಯೆಲ್ಸ್ ಹಾಸುವ ಕಾರ್ಯ ಮಾಡಲಾಗುವುದು. ಜೊತೆಗೆ ಅದಾನಿ ಸಂಸ್ಥೆಯ ವತಿಯಿಂದ ರೂ. 10 ಲಕ್ಷ ವೆಚ್ಚದಲ್ಲಿ ಶಾಲೆಗೆ ಸುಸಜ್ಜಿತ ಶೌಚಾಲಯದ ವ್ಯವಸ್ಥೆ ಮಾಡಲಾಗುವುದು ಎಂದರು.

ಆಶೀರ್ವಚನಗೈದು ಮಾತನಾಡಿದ ,  ಕೊಲಕಾಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ, ಒಂದು ಕಾಲದಲ್ಲಿ ಲಿಂಗಪ್ಪಯ್ಯ ಕಾಡಾಗಿದ್ದ ಈ ಪ್ರದೇಶವು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡು ಸದಾಶಿವ ರಾಯರ ಹೆಸರಿನಲ್ಲಿ ಕೆ.ಎಸ್. ರಾವ್ ನಗರವಾಗಿ ಪರಿವರ್ತನೆ ಗೊಂಡಿದೆ. ಹಿರಿಯರ ಆಶಯದಂತೆ ಇಲ್ಲಿನ ಶಾಲೆಯು ಇನ್ನಷ್ತು ಉನ್ನತ ಮಟ್ಕಕೇರಲೆಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಶಾಸಕ ಕೆ. ಅಭಯಚಂದ್ರ ಜ್ಯೆನ್, ಶಾಲೆಯ ಹಿಥೈಶಿ ಡಾ ಹರಿ ಪ್ರಸಾದ್ ಶೆಟ್ಟಿ ಸೇರಿದಂತೆ ಕಳೆದ 25 ವರ್ಷಗಳಲ್ಲಿ ಶಾಲೆಯ ಅಭಿವೃದ್ಧಿಗೆ ಸಹಕರಿಸಿದವರನ್ನು ಇದೆ ವೇಳೆ ಗೌರವಿಸಲಾಯಿತು.
    
ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ, ಮಾಜಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಸದಸ್ಯರಾದ ಬಶೀರ್ ಕುಳಾಯಿ, ಪುರುಷೋತ್ತಮ, ಯೋಗೀಶ್ ಕೋಟ್ಯಾನ್, ವಿಮಲಾ ಪೂಜಾರಿ, ಶಂಕ್ರವ್ವ, ಕಲಾವತಿ, ಅಶೋಕ್ ಪೂಜಾರ್, ಶೈಲೇಶ್ ಕುಮಾರ್, ಮೂಡಾದ ಸದಸ್ಯ ವಸಂತ ಬೆರ್ನಾರ್ಡ್, ಉದ್ಯಮಿ ಸೈಯದ್ ಕರ್ನಿರೆ, ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿ ಸಾಹುಲ್ ಹಮೀದ್ ಕದಿಕೆ, ಉದ್ಯಮಿ ಅಗರಿ ರಾಘವೇಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  

ಶಾಲೆಯ ರಜತ ಮಹೋತ್ಸವ ಸಮಿತಿಯ ಉಪಾಧ್ಯಕ್ಷರಾದ ಡಾ. ಕೆ. ಹರಿಪ್ರಸಾದ್ ಶೆಟ್ಟಿ, ಬಿ. ಎಂ. ಇದಿನಬ್ವ, ಜನಾರ್ಧನ ಬಂಗೇರ, ಮಂಜುನಾಥ ಕಂಬಾರ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಮತಿ ಬಾಯಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭೀಮಶಂಕರ್ ಆರ್.ಕೆ., ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಂಧ್ಯಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ. ರಫೀಕ್ ಮತ್ತಿತರರು ಉಪಸ್ಥಿತರಿದ್ದರು.
  
ಶಾಲೆಯ ರಜತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ನವೀನ್ ಪುತ್ರನ್ ಸ್ವಾಗತಿಸಿದರು.

ಅಧ್ಯಕ್ಷ ಬಿ. ಎಂ. ಆಸ್ೀ ಪ್ರಸ್ತಾವನೆಗ್ಯೆದರು. ವಿನಯ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News