×
Ad

ಆಳ್ವಾಸ್, ಬೆಸೆಂಟ್ ಕಾಲೇಜುಗಳಿಗೆ ಚಾಂಪಿಯನ್ ಟ್ರೋಫಿ

Update: 2017-01-14 23:39 IST

ಶಿರ್ವ, ಜ.14: ಶಿರ್ವದ ಎಂಎಸ್‌ಆರ್‌ಎಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಪುರುಷ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾಟಗಳಲ್ಲಿ ಮೂಡುಬಿದರೆಯ ಆಳ್ವಾಸ್ ಮತ್ತು ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜು ತಂಡಗಳು ಮುಲ್ಕಿ ಸುಂದರ ರಾಮ್ ಶೆಟ್ಟಿ ಸ್ಮಾರಕ ಟ್ರೋಫಿಗಳನ್ನು ಗೆದ್ದುಕೊಂಡಿವೆ.

ಆತಿಥೇಯ ಎಂಎಸ್‌ಆರ್‌ಎಸ್ ಕಾಲೇಜು ಪುರುಷರ ವಿಭಾಗದಲ್ಲಿ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದವು. ಈ ಪಂದ್ಯಗಳನ್ನು ವಿಜಯಾ ಬ್ಯಾಂಕ್ ಮತ್ತು ಮುಂಬೈ ಹಳೆವಿದ್ಯಾರ್ಥಿ ಸಂಘಗಳ ಸಹಯೋಗದಲ್ಲಿ ನಡೆಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ವಿಜಯ ಬ್ಯಾಂಕ್‌ನ ಪ್ರಬಂಧಕ ಮೆಲ್ವಿನ್ ಪಿಂಟೋ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಸಭೆಯಲ್ಲಿ ಉಪಸ್ಥಿತರಿದ್ದರು. ಉದ್ಘಾಟನೆ:

ಇದಕ್ಕೂ ಮೊದಲು ನಡೆದ ವಾಲಿಬಾಲ್ ಪಂದ್ಯಾಟಗಳನ್ನು ವಿಜಯ ಬ್ಯಾಂಕ್‌ನ ರೀಜನಲ್ ಮ್ಯಾನೇಜರ್ ಎಂ.ಜೆ.ನಾಗರಾಜ್ ಉದ್ಘಾಟಿಸಿದರು. ಕಾಲೇಜಿನ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ.ವಿನೋಬ್‌ನಾಥ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜ್ಞೇಶ್ ವಂದಿಸಿದರು. ಪ್ರೊ. ಹೇಮಲತಾ ಮತ್ತು ಪ್ರೊ.ಸುಪ್ರೀತಾ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News