×
Ad

ರಸ್ತೆ ಸಂಚಾರ ಬದಲು

Update: 2017-01-14 23:40 IST

ಮಂಗಳೂರು, ಜ.14: ಬಂಟ್ವಾಳ ತಾಲೂಕಿನ ಸುಬ್ರಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯ ಮಡಿಯಾಳ ಎಂಬಲ್ಲಿ (ಬೈರಿಕಟ್ಟೆ ಜಂಕ್ಷನ್ ಸಮೀಪ) ಸೇತುವೆ ಪುನರ್ ನಿರ್ಮಾಣ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಹಳೆಯ ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣವಾಗುವವರೆಗೆ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

 ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪಡಿಬಾಗಿಲಿನಿಂದ ಉಕ್ಕುಡ ಜಂಕ್ಷನ್‌ಗೆ ತೆರಳಿ ಮಂಜೇಶ್ವರ ರಸ್ತೆಯಲ್ಲಿ ಪರ್ಯಾಯವಾಗಿ ಸಂಚರಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News