ಶೊಟೊಕಾನ್ ಕರಾಟೆ ತಂಡ ಚಾಂಪಿಯನ್
Update: 2017-01-14 23:43 IST
ಕಾಪು, ಜ.14: ಜಪಾನ್ ಶೊಟೊಕಾನ್ ಕರಾಟೆ ಡು ಕನ್ನಿಂಜುಕು ಆರ್ಗ ನೈಝೇಶನ್ ಕರ್ನಾಟಕ ಇದರ ವತಿಯಿಂದ ಕಾಪುವಿನ ಕಾಂಚನ್ ಸಮುದಾಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ರಾಜ್ಯಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಶೊಟೊಕಾನ್ ಕರಾಟೆ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದು ಕೊಂಡಿತು.
ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಬುಡೊಕಾನ್ ತಂಡದ ಕೀರ್ತಿರಾಜ್ ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಅದಾನಿ ಯುಪಿಎಲ್‌ಸಿಯ ಕಿಶೋರ್ ಆಳ್ವ ವಿಜೇತರಿಗೆ ಪದಕಗಳನ್ನು ವಿತರಿಸಿದರು. ಕೆಎಐಯ ಚೇರ್‌ಮೆನ್ ರೆರಿ ಕಮಿಷನ್ ರೆನ್ಶಿ ಪರಮಜೀತ್ ಸಿಂಗ್, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗೂರ್ ಮಾತನಾಡಿದರು.