ಬೈಕ್ ಅಪಘಾತ: ಸಹ ಸವಾರ ಮೃತ್ಯು
Update: 2017-01-14 23:47 IST
ಸುಳ್ಯ, ಜ.14: ಕಳಂಜ ಗ್ರಾಮದ ಕೋಟೆಮುಂಡುಗಾರು ಬಳಿಯ ಕೊಲ್ಲರ್‌ನೂಜಿ ಎಂಬಲ್ಲಿ ನಡೆದ ಬೈಕ್ ಅಪಘಾತದಲ್ಲಿ ಸಹ ಸವಾರ ಮೃತಪಟ್ಟು, ಸವಾರ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.
ಕಳಂಜ ಗ್ರಾಮದ ಕಜೆಮೂಲೆ ಗುಡ್ಡಪ್ಪನಾಯ್ಕರ ಪುತ್ರರಾದ ರಾಮಚಂದ್ರ ನಾಯ್ಕ ಮತ್ತು ಸಹೋದರ ಬಾಲಕೃಷ್ಣ ನಾಯ್ಕ ಎಂಬವರು ಚಲಾಯಿಸುತ್ತಿದ್ದ ಬೈಕ್ ಅಪಘಾತವಾಯಿತೆನ್ನಲಾಗಿದೆ.
ಗಂಭೀರ ಗಾಯಗೊಂಡಿದ್ದ ಬೈಕ್‌ನ ಹಿಂಬದಿ ಸವಾರ ರಾಮಚಂದ್ರ ನಾಯ್ಕ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ. ಬೈಕ್ ಸವಾರ ಬಾಲಕೃಷ್ಣ ತೀವ್ರ ಗಾಯಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.