×
Ad

ಪತ್ರಕರ್ತರ ಕರ್ತವ್ಯ ನಿರ್ವಹಣೆಗೆ ಅಡ್ಡಿ ರಕ್ಷಣೆಗಾಗಿ ಪೊಲೀಸರಿಗೆ ಮೊರೆ

Update: 2017-01-14 23:48 IST

ಸುಬ್ರಹ್ಮಣ್ಯ, ಜ.14: ಪಂಜದ ಗುರುಪ್ರಸಾದ್ ಮತ್ತು ಆಶಿತ್ ಕಲ್ಲಾಜೆ ಅವರು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಸುಳ್ಯ ತಾಲೂಕಿನ ವಾರಪತ್ರಿಕೆ ಸುದ್ದಿಬಿಡುಗಡೆ ಪತ್ರಿಕೆಯ ವರದಿಗಾರರಾದ ಈಶ್ವರ ವಾರಣಾಶಿ ಮತ್ತು ವಿಶ್ವನಾಥ ಮೋಟುಕಾನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

  ಸುದ್ದಿ ಪತ್ರಿಕೆಯ ವರದಿಗಾರರಾದ ನಾವು ಮಾಹಿತಿ ಟ್ರಸ್ಟ್ ವತಿಯಿಂದ ಗ್ರಾಮ ದರ್ಶನ ಕಾರ್ಯಕ್ರಮಕ್ಕಾಗಿ ಮಾಹಿತಿ ಸಂಗ್ರಹಿಸಲು ಮನೆಮನೆ ಭೇಟಿ ಸಂದಭರ್ ಪಂಜದ ಗುರುಪ್ರಸಾದ್ ಮತ್ತು ಆಶಿತ್ ಕಲ್ಲಾಜೆ ಸುದ್ದಿ ಪತ್ರಿಕೆಗೆ ಬೆಂಕಿ ಹಾಕುವುದಾಗಿ ಬೆದರಿಸಿದ್ದು ನಮಗೆ ನಿರ್ಭೀತವಾಗಿ ಕಾರ್ಯ ನಿರ್ವಹಿಸಲು ಕಷ್ಟಸಾಧ್ಯವಾಗಿದೆ ಹಾಗಾಗಿ ಪೊಲೀಸ್ ರಕ್ಷಣೆ ನೀಡಬೇಕೆಂದು ಸುಳ್ಯ ವೃತ್ತ ನಿರೀಕ್ಷರಿಗೆ ದೂರು ನೀಡಿರುವುದಾಗಿ ಶುಕ್ರವಾರದಂದು ಸುಬ್ರಹ್ಮಣ್ಯದಲ್ಲಿಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಮ್ಮ ಭೇಟಿಯ ಉದ್ದೇಶ ಮಾಹಿತಿ ಸಂಗ್ರಹವಾಗಿತ್ತು. ಆದರೆ ಅವರು ನಮ್ಮನ್ನು ಪೊಲೀಸ್ ಕೇಸ್‌ಗೆ ಒಳಪಡಿಸುವ ಸಂಚು ಹೂಡಿ ಸುಳ್ಳು ದೂರು ನೀಡಿರುವುದು ಕಂಡು ಬಂದಿರುವುದರಿಂದ ನಮಗೆ ರಕ್ಷಣೆ ಬೇಕೆಂದು ಸುಳ್ಯ ವೃತ್ತ ನಿರೀಕ್ಷಕರಿಗೆ ದೂರು ನೀಡಿದ್ದೇವೆ. ನಮ್ಮ ೆನ್‌ಗೆ ಕರೆಮಾಡಿ ಬೆದರಿಕೆ ಒಡ್ಡುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ, ಅಪಪ್ರಚಾರ, ಬ್ಲಾಕ್‌ಮೇಲ್‌ಗಳಿಂದಾಗಿ ಸುದ್ದಿಯ ಸಿಬ್ಬಂದಿಯಾದ ನಮಗೆ ಕಾರ್ಯ ನಿರ್ವಹಿಸಲು ಕಷ್ಟವಾಗಿದೆ. ನಮ್ಮ ನೋವನ್ನು ಪತ್ರಕರ್ತರು ಹಾಗೂ ಪತ್ರಿಕಾ ಮಾಧ್ಯಮದ ಮೂಲಕ ತಿಳಿಸುತ್ತಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸುದ್ದಿ ಸಮೂಹ ಸಂಸ್ಥೆಯ ಶ್ರೇಯಾಸ್ ಊರುಬೈಲು, ಪತ್ರಕರ್ತರಾದ ಹರೀಶ್ ಬಂಟ್ವಾಳ್, ಈಶ್ವರ ವಾರಣಾಶಿ ಮತ್ತು ವಿಶ್ವನಾಥ ಮೊಟುಕಾನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News