×
Ad

ಆರೋಪಿಗಳನ್ನು ಕಿನ್ನಿಗೋಳಿಗೆ ಕರೆತಂದು ಸ್ಥಳ ಪರಿಶೀಲನೆ

Update: 2017-01-14 23:50 IST

ಮುಲ್ಕಿ, ಜ.14: ಕಳೆದ ಕೆಲವು ದಿನಗಳ ಹಿಂದೆ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ಗುಡ್ಡ ಪ್ರದೇಶದಲ್ಲಿ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಂಬಳಿಮನೆ ನಿವಾಸಿ ಉಮೇಶ್ ಶೆಟ್ಟಿ(29)ಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂತರಾದ ನಾಲ್ವರು ಆರೋಪಿಗಳನ್ನು ಪೊಲೀಸರು ಕಿನ್ನಿಗೋಳಿ ಪರಿಸರಕ್ಕೆ ಕರೆತಂದು ಶುಕ್ರವಾರ ಸಂಜೆ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

 ಮುಲ್ಕಿ ಹಾಗೂ ಮೂಡುಬಿದಿರೆ ಪೊಲೀಸರು ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಆರೋಪಿಗಳಾದ ನಿಡ್ಡೋಡಿ ನಿವಾಸಿ ರಾಜೇಶ್ ಶೆಟ್ಟಿ(32), ತಿಲಕ್ ಪೂಜಾರಿ(26) ಹಾಗೂ ಕಿನ್ನಿಗೋಳಿ ನಡುಗೋಡು ಗ್ರಾಮದ ಕೊಡೆತ್ತೂರು ಬಳಿಯ ಪ್ರಸಾದ ಆಚಾರ್ಯ(27)ಹಾಗೂ ಅವನ ಚಿಕ್ಕಮ್ಮನ ಮಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿ ಪ್ರಕಾಶ್ ಆಚಾರ್ಯ(28) ರನ್ನು ಕಿನ್ನಿಗೋಳಿಯ ಕೊಡೆತ್ತೂರಿಗೆ ಕರೆತಂದು ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News