ಕಾಂಗ್ರೆಸ್‌ಗೆ ಮುನ್ನಡೆ, ಬಿಜೆಪಿಗೆ ಹಿನ್ನಡೆ

Update: 2017-01-14 18:23 GMT

ಬೆಳ್ತಂಗಡಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಫಲಿತಾಂಶ

ಬೆಳ್ತಂಗಡಿ, ಜ.14: ಇಲ್ಲಿನ ಕೃಷಿ ಉತ್ಪನ ಮಾರುಕಟ್ಟೆ ಸಮಿತಿಗೆ ನಡೆದ ಚುನಾವಣೆಯ ಮತ ಎಣಿಕೆಯ ಕಾರ್ಯ ಪೂರ್ಣಗೊಂಡಿದ್ದು, ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದುಕೊಂಡು ಭಾರೀ ಗೆಲುವನ್ನು ತನ್ನದಾಗಿಸಿಕೊಂಡಿದೆ. ಬಿಜೆಪಿಗೆ ಹಿನ್ನಡೆಯಾಗಿದ್ದು ಕೇವಲ 5 ಸ್ಥಾನಗಳು ಲಭಿಸಿವೆ.

ಬೆಳ್ತಂಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪಲ್ಲವಿ 834 ಮತಗಳನ್ನು ಗಳಿಸಿದರೆ, ಬಿಜೆಪಿಯ ವಿಮಲಾ 799 ಮತಗಳನ್ನು ಮಾತ್ರ ಗಳಿಸಲು ಶಕ್ತರಾಗಿ ಸೋಲುಂಡರು. ಉಜಿರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇಶವಗೌಡ ಬೆಳಾಲು 954 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ ಅತ್ತಾಜೆ ಕೇಶವ ಭಟ್ (612 ಮತಗಳು)ರನ್ನು 342 ಮತಗಳಿಂದ ಸೋಲಿಸಿದರು. ಕಣಿಯೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗಣೇಶ್ ಪ್ರಸಾದ್ ಕೆರ್ಮುಣ್ಣಾಯ 1196 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ ಬಿಜೆಪಿಯ ಪುರಂದರ ಶೆಟ್ಟಿ (858 ಮತಗಳು) ಅವರನ್ನು 338 ಮತಗಳಿಂದ ಸೋಲಿಸಿದರು. ಮಚ್ಚಿನ ಕ್ಷೇತ್ರದಲ್ಲಿ ಬಿಜೆಪಿಯ ಜಯಾನಂದ ಕಲ್ಲಾಪು 1119 ಮತಗಳನ್ನು ಪಡೆದು ಕಾಂಗ್ರೆಸ್‌ನ ಸಂತೋಷ್‌ಕುಮಾರ್ (857 ಮತಗಳು) ಅವರನ್ನು 262 ಮತಗಳ ಅಂತರದಿಂದ ಸೋಲಿಸಿದರು. ಮಹಿಳಾ ಮೀಸಲಾತಿಯಿರುವ ಮಡಂತ್ಯಾರು ಕ್ಷೇತ್ರದಲ್ಲಿ ಬಿಜೆಪಿಯ ಸೆಲೆಸ್ಟಿನ್ ಡಿಸೋಜ 1047 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ ಕಾಂಗ್ರೆಸ್‌ನ ಸುಲೋಚನಾ ಬಂಗೇರ (826 ಮತಗಳು) ಅವರನ್ನು 221 ಮತಗಳಿಂದ ಸೋಲಿಸಿದರು.

ಅಳದಂಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಚಿದಾನಂದ ಪೂಜಾರಿ 960 ಮತಗಳನ್ನು ಪಡೆದು ಪ್ರತಿಸ್ಪರ್ ಬಿಜೆಪಿಯ ಭಾಸ್ಕರ ಸಾಲ್ಯಾನ್ (726 ಮತಗಳು)ರನ್ನು 234 ಮತಗಳಿಂದ ಸೋಲಿಸಿದರು. ವೇಣೂರು ಕ್ಷೇತ್ರದಲ್ಲಿ ಬಿಜೆಪಿಯ ಅಶೋಕ್ ಗೋವಿಯಸ್ 1484 ಮತಗಳನ್ನು ಪಡೆದು ವಿಜೇತರಾದರು. ಅವರ ಪ್ರತಿಸ್ಪರ್ ಕಾಂಗ್ರೆಸ್‌ನ ಜಯರಾಮ ಶೆಟ್ಟಿ (1466 ಮತಗಳ) 18 ಮತಗಳಿಂದ ಸೋಲುಂಡರು. ನಾರಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸತೀಶ್ ಕಾಶಿಪಟ್ನ 1885 ಮತಗಳನ್ನು ಪಡೆದು ತನ್ನ ಪ್ರತಿಸ್ಪರ್ ಬಿಜೆಪಿಯ ವಿಠಲ ಸಿ. ಪೂಜಾರಿ (868 ಮತಗಳು)ಅವರನ್ನು 1017 ಮತಗಳ ಅಂತರದಿಂದ ಸೋಲಿಸಿದರು.

ನೆರಿಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಬ್ದುಲ್ ಗೂರ್ 1066 ಮತಗಳನ್ನು ಪಡೆದು ತನ್ನ ಪ್ರತಿಸ್ಪರ್ ಬಿಜೆಪಿಯ ನಾರಾಯಣಗೌಡ ಕೊಳಂಬೆ (947 ಮತಗಳು)ಅವರನ್ನು 119 ಮತಗಳಿಂದ ಸೋಲಿಸಿದರು. ಕೊಕ್ಕಡ ಕ್ಷೇತ್ರದಲ್ಲಿ ಬಿಜೆಪಿಯ ಈಶ್ವರ ಭೈರ 1021 ಮತಗಳನ್ನು ಗಳಿಸಿ ವಿಜೇತರಾಗಿದ್ದು ತಮ್ಮ ಪ್ರತಿಸ್ಪರ್ ಕಾಂಗ್ರೆಸ್‌ನ ಚಂದು ಎಲ್ (821 ಮತಗಳು)ಅವರನ್ನು 195 ಮತಗಳಿಂದ ಸೋಲಿಸಿದರು. ಇಂದಬೆಟ್ಟು ಕ್ಷೇತ್ರದಲ್ಲಿ ಬಿಜೆಪಿಯ ಆನಂದ ನಾಯ್ಕ 913 ಮತಗಳನ್ನು ಪಡೆದು ವಿಜೇತರಾದರೆ ಕಾಂಗ್ರೆಸ್‌ನ ಲಕ್ಷ್ಮಣ ಮಲೆಕುಡಿಯ (744 ಮತಗಳು) 169 ಮತಗಳಿಂದ ಸೋಲುಂಡರು.

ವರ್ತಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪುಷ್ಪರಾಜ ಹೆಗ್ಡೆ 72 ಮತಗಳನ್ನು ಗಳಿಸಿ ವಿಜೇತರಾದರೆ ಬಿಜೆಪಿಯ ಚಂದ್ರಶೇಖರಗೌಡ ಅವರಿಗೆ ಕೇವಲ 17 ಮತಗಳು ಮಾತ್ರ ಲಭಿಸಿದವು. ಸಹಕಾರಿ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಇ.ಸುಂದರಗೌಡ ಹಾಗೂ ಕೃಷಿ ಉತ್ಪನ್ನ ಮಾರಾಟ ಸಂಸ್ಕರಣ ಸಹಕಾರಿ ಸಂಘಗಳ ಕ್ಷೇತ್ರದಿಂದ ಜೀವಂಧರ ಕುಮಾರ್ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News