×
Ad

ಮಂಜೇಶ್ವರ: 37 ಲೀಟರ್ ಮದ್ಯ ವಶ-ನಾಲ್ವರ ಸೆರೆ

Update: 2017-01-15 11:34 IST

ಮಂಜೇಶ್ವರ, ಜ.15: ವಿವಿಧ ಪ್ರಕರಣಗಳಲ್ಲಾಗಿ 37 ಲೀಟರ್ ಮದ್ಯವನ್ನು ಕುಂಬಳೆ ಎಕ್ಸೈಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ನಾಲ್ವರನ್ನು ಬಂಧಿಸಿದ್ದಾರೆ.

ಶನಿವಾರ ಸಂಜೆ ಪೊಸೋಟ್ ಬಳಿ ವಾಹನ ತಪಾಸಣೆ ವೇಳೆ ಮದ್ಯ ಪತ್ತೆ ಹಚ್ಚಲಾಗಿದ್ದು, ಕಾಞಂಗಾಡು ಅಜಾನೂರು ಕಡಪ್ಪುರದ ಮುತ್ತಪ್ಪ ಮೌನೇಶ ಗೌಡಗಿ(21) , ಅನಿಲ್(48) , ಕೆ.ರಮೇಶನ್ (46) , ಕೊಲ್ಲಂಗಾನದ ಜೋಸೆಫ್ ಡಿಸೂಸಾ(57) ಎಂಬವರನ್ನು ಬಂಧಿಸಲಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಕುಂಬಳೆ ರೇಂಜ್ ಇನ್ ಸ್ಪೆಕ್ಟರ್ ರೋಬಿನ್ ಬಾಬು, ಅಸಿಸ್ಟಂಟ್ ಇನ್ ಸ್ಪೆಕ್ಟರ್ ಗಳಾದ ಎಂ.ವಿ ಬಾಬುರಾಜ್ , ಎಂ.ಪವಿತ್ರನ್ ಕಾರ್ಯಾಚರಣೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News