ಒಮನ್: ಭಾರತ ಶಿಕ್ಷಣ ಪ್ರದರ್ಶನ ನಾಳೆಯಿಂದ

Update: 2017-01-15 07:09 GMT

ಮಸ್ಕತ್, ಜ.15: ಭಾರತದ ವಿವಿಧ ರಾಜ್ಯಗಳ ಉನ್ನತ ಶಿಕ್ಷಣ ಸಾಧ್ಯತೆಗಳು ಮತ್ತು ಅವಕಾಶನ್ನು ವಿವರಿಸುವ ಇಂಡಿಯ ಎಜುಕೇಶ್ ಎಕ್ಸಿಬಿಷನ್ 2017 ಈ ತಿಂಗಳ 16,17ಕ್ಕೆ ಮಸ್ಕತ್‌ನಲ್ಲಿ ನಡೆಯಲಿದೆ.

ರೂವಿ ಹಫಾಹೌಸ್ ಹೊಟೇಲ್‌ನಲ್ಲಿ ನಡೆಯುವ ಪ್ರದರ್ಶನದಲ್ಲಿ ಭಾರತದ ಮುಂಚೂಣಿ ವಿಶ್ವವಿದ್ಯಾನಿಲಯಗಳು ಶಿಕ್ಷಣ ಸಂಸ್ಥೆಗಳುಭಾಗವಹಿಸಲಿವೆ. ವಿದ್ಯಾಥಿಗಳು, ಹೆತ್ತವರುವಿವಿಧ ಸಂಸ್ಥೆಗಳ ಅಕಾಡಮಿಕ್ ವಿಭಾಗದ ಮುಖ್ಯಸ್ಥರು,ಪ್ರೊಫೆಸರ್‌ಗಳನ್ನು ಭೇಟಿ ಮಾಡುವ ಅವಕಾಶ ಎಕ್ಸಿಬಿಷನ್‌ನಲ್ಲಿ ದೊರಕಲಿದೆ. ಕೌನ್ಸಲಿಂಗ್ ಸೆಶನ್‌ಗಳು ಮತ್ತು ಎರಡು ದಿನಗಳ ವಸ್ತು ಪ್ರದರ್ಶನಗಳು ಇವೆ.

ವಿವಿಧ ವಿಶ್ವವಿದ್ಯಾನಿಲಯದಲ್ಲಿ ಲಭಿಸುವ ಕೋರ್ಸ್‌ಗಳು, ಫೀಜು ಮೊತ್ತ, ಉದ್ಯೋಗಾವಕಾಶಗಳು, ಉದ್ಯೋಗ ಲಭ್ಯಗೊಳಿಸುವುದು ಮುಂತಾದ ಮಾಹಿತಿಗಳನ್ನು ಪಡೆಯಲು ಎಕ್ಸಿಬಿಷನ್ ಸುವರ್ಣಾವಕಾಶವಾಗಿದೆ ಎಂದು ಸಂಘಟಕರು ಹೇಳಿದ್ದಾರೆ.

ಅತ್ಯಂತ ಅಗತ್ಯದ ನೂರು ಕೋರ್ಸ್‌ಗಳು, ವಿದೇಶಿ ಭಾರತೀಯರಿಗಿರುವ ಸ್ಕಾಲರ್‌ಶಿಫ್ ಕುರಿತು ಮಾಹಿತಿ ನೀಡಲಾಗುತ್ತದೆ. ಅಣ್ಣಾ ವಿಶ್ವವಿದ್ಯಾನಿಲಯ, ಮಣಿಪಾಲ್ ವಿಶ್ವವಿದ್ಯಾನಿಲಯ, ಎಸ್ ಆರ್ ಎಂ ವಿಶ್ವವಿದ್ಯಾನಿಲಯ, ಹಿಂದುಸ್ಥಾನ್ ವಿಶ್ವವಿದ್ಯಾನಿಲಯ, ಎಂ.ಎಸ್. ರಾಮಯ್ಯ ಯುನಿವರ್ಸಿಟಿ ಮುಂತಾದ ಭಾರತದ ಮುಂಚೂಣಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಶಿಕ್ಷಣ ಪ್ರದರ್ಶನಕ್ಕೆ ಸಂಜೆ 3:45ರಿಂದ ರಾತ್ರಿ 9:30ರವರೆಗೆ ಪ್ರವೇಶ ಇದೆ.

ಪ್ರತಿವರ್ಷವೂವಿವಿಧ ರಾಷ್ಟ್ರಗಳ ಐವತ್ತು ಸಾವಿರ ಸಂದರ್ಶಕರು ಶಿಕ್ಷಣ ಪ್ರದರ್ಶನಕ್ಕೆ ಭೇಟಿ ನೀಡುತ್ತಾರೆ. ಇಂಡಸ್ ಗ್ರೂಪ್, ಈಸ್ಟ್ ಎಕ್ಸ್‌ಪೊ ಎಲ್‌ಎಲ್‌ಸಿ ಒಮನ್, ಲಿಂಗ್ಸ್ ಒಮನ್ ಜಂಟಿಯಾಗಿ ಪ್ರದರ್ಶನವನ್ನು ಆಯೋಜಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News