ವಿದ್ಯಾಭಾರತಿ ವಿದ್ಯಾಕೇಂದ್ರದಲ್ಲಿ ರಕ್ತದಾನ ಶಿಬಿರ
ಉಪ್ಪಿನಂಗಡಿ, ಜ.15: ವಿದ್ಯಾಭಾರತಿ ವಿದ್ಯಾಕೇಂದ್ರದ 7ನ ವಾರ್ಷಿಕ ಸಮಾರಂಭದ ಅಂಗವಾಗಿ , ಆಪ್ಟಿಮಸ್ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ಹಾಗೂ ಯೇನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ವತಿಯಿಂದ ಪಟ್ಟಣದ ಗೋಳಿತ್ತಡಿ ಅಝ್ಮಿಯ ಕಾಂಪ್ಲೆಕ್ಸ್‌ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಅಸಯ್ಯದ್ ಅಲ್‌ಹಾದಿ ಅನಸ್ ತಂಙಳ್ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನದಂತಹ ಶಿಬಿರಗಳಿಂದಾಗಿ ಸೌರ್ಹಾದತೆ ಹಾಗೂ ಮಾನವೀಯತೆಗೆ ಮಹತ್ತರವಾದ ಸಂದೇಶ ನೀಡಿದಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಯಿಲದ ವೈದ್ಯೆ ಡಾ.ರಜನಿ, ಅಸಯ್ಯದ್ ಜುನೈದ್ ಜಿಫ್ರಿ ತಂಙಳ್ ಖತೀಬರು ಬಿಜೆಎಂ ಆತೂರು, ಅಬ್ದುಲ್ ಹಮಿದ್ ನಾಸಿರ್ ಆನಡ್ಕ ಮುಖ್ಯೋಪಾಧ್ಯಾಯರು ದಾರುಲ್ ಅಶ್‌ಅರಿಯ್ಯ ಸುರಿಬೈಲು ಶಿಬಿರ ಉದ್ದೇಶಿಸಿ ಮಾತನಾಡಿದರು.
ದೇರಳಕಟ್ಟೆಯ ಯೇನಪೋಯ ಮೆಡಿಕಲ್ ಕಾಲೇಜಿನ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ.ಶರೀಫ್, ಇಕ್ಬಾಲ್ ಹಳೇನೇರೆಂಕಿ ಅಧ್ಯಕ್ಷರು ಆಪ್ಟಿಮಸ್ ವೆಲ್‌ಫೇರ್ ಟ್ರಸ್ಟ್, ಹನೀಫ್ ಫೈಝಿ ಆತೂರು, ಜಿಎಂ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಆತೂರು, ಇಕ್ಬಾಲ್ ಬಲ್ಲಮಂಜ ಗ್ರಾಪಂ ಸದಸ್ಯರು ಮಚ್ಚಿನ, ಬಿಕೆ ಅಬ್ದುಲ್ ರವೂಫ್ ಮಾಜಿ ಗ್ರಾಪಂ ಸದಸ್ಯರು ರಾಮಕುಂಜ, ಅಯ್ಯೂಬ್ ಹಾಜಿ ಅಮೈ, ಬಿ.ಕೆ.ಅಬ್ಬಾಸ್ ಅರಫಾ, ಬದ್ರುದ್ದೀನ್ ಬಿಕೆ, ಇಬ್ರಾಹಿಂ ಹಾಜಿ ಹಳೇನೇರೆಂಕಿ ಮುಂತಾದವರು ಉಪಸ್ಥಿತರಿದ್ದರು.
ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಡಾ.ಕೆ.ಎಂ.ಶಾಹ್ ಮುಸ್ಲಿಯಾರ್ ದುವಾಶಿರ್ವಚನೆ ನೀಡಿದರು. ಅಬ್ದುಲ್ಲ ಹಾಜಿ ಕುಂಡಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆತೂರು, ಗೋಳಿತ್ತಡಿ, ನೀರಾಜೆ, ಆತೂರುಬೈಲು, ಮಜಲು, ಕುಂಡಾಜೆ, ಕೆಮ್ಮಾರ, ಹಳೇನೇರೆಂಕಿ ಕುದ್ಲೂರು ಸುತ್ತಮುತ್ತಲಿನ ಹಲವಾರು ಯುವಕರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ 90 ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸಲಾಯಿತು.