ಪರಂಗಿಪೇಟೆಯಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರ
Update: 2017-01-15 16:19 IST
ಬಂಟ್ವಾಳ, ಜ.15: ಇಲ್ಲಿನ ವಿಶ್ವಾಸ್ ಸಿಟಿ ಸೆಂಟರ್ನಲ್ಲಿರುವ ನಮ್ಮ ಆಯುರ್ವೇದ ಚಿಕಿತ್ಸಾಲಯ ಮತ್ತು ಔಷಧಾಲಯದಲ್ಲಿ ರವಿವಾರ ಉಚಿತ ಮಧುಮೇಹ ತಪಾಸಣಾ ಶಿಬಿರ ನಡೆಯಿತು.
ಶಿಬಿರವನ್ನು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕ್ರಷ್ಣ ಕುಮಾರ್ ಪೂಂಜ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ನಮ್ಮ ಆಯುರ್ವೇದ ಚಿಕಿತ್ಸಾಲಯ ಮತ್ತು ಔಷಧಾಲಯದ ವೈದರಾದ ಡಾ.ಮಹೇಶ್ ಟಿ.ಎಸ್., ಡಾ.ಶ್ರೀವಿದ್ಯಾ ಎಂ., ಶ್ರೀಲಕ್ಷ್ಮಿ ಲ್ಯಾಬ್ ನ ಧನಲಕ್ಷ್ಮಿ, ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ರಾಜಶ್ರೀ, ಪ್ರಮುಖರಾದ ಮುಹಮ್ಮದ್ ಹುಸೈನ್ ಉಪಸ್ಥಿತರಿದ್ದರು.
ಫರಂಗಿಪೇಟೆ ಮತ್ತು ಸುತ್ತಮುತ್ತಲಿನ ಹಲವಾರು ಮಂದಿ ಮಧುಮೇಹ ತಪಾಸಣೆ ನಡೆಸುವ ಮೂಲಕ ಶಿಬಿರದ ಪ್ರಯೋಜನ ಪಡೆದರು. ಪತ್ರಕರ್ತ ಹರೀಶ್ ಮಾಂಬಾಡಿ ಸ್ವಾಗತಿಸಿ, ವಂಧಿಸಿದರು.