ತಂದೆಗೆ ಮಗನಿಂದ ಹಲ್ಲೆ

Update: 2017-01-15 18:51 GMT

ಉಪ್ಪಿನಂಗಡಿ, ಜ.15: ತಂದೆ ಮತ್ತು ಮಗನ ನಡುವೆ ಮಾತಿನ ಚಕಮಕಿ ನಡೆದು ಮಗ ತಂದೆಗೆ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ತಂದೆ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಉಪ್ಪಿನಂಗಡಿ ಕುದ್ಲೂರು ಮನೆ ನಿವಾಸಿ ಆದಂ (55) ಎಂಬವರು ಹಲ್ಲೆಗೀಡಾದವರು.

ಭೂಮಿಯ ವಿಚಾರವಾಗಿ ಆದಂ ಹಾಗೂ ಅವರ ಮಗ ಅಬೂಬಕರ್ ನಡುವೆ ಮನಸ್ತಾಪವಿದ್ದು, ಈ ಸಂಬಂಧ ಉಪ್ಪಿನಂಗಡಿ ಬ್ಯಾಂಕ್ ರೋಡ್‌ನಲ್ಲಿರುವ ಮಗನ ತರಕಾರಿ ಅಂಗಡಿಗೆ ಬಂದ ಆದಂ ಮಗನೊಂದಿಗೆ ಮಾತಿನ ಚಕಮಕಿಗಿಳಿದಿದ್ದರು. ಮಾತು ವಿಕೋಪಕ್ಕೆ ತಿರುಗಿದಾಗ ತಾಳ್ಮೆ ಕಳೆದುಕೊಂಡ ಮಗ ಅಂಗಡಿಯಲ್ಲಿದ್ದ ರಾಡ್‌ನಿಂದ ತಂದೆಯ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ ಎನ್ನಲಾಗಿದೆ.

ಅಲ್ಲದೇ, ಗಾಯಗೊಂಡ ತಂದೆಯನ್ನು ಕೂಡಲೇ ವಾಹನವೊಂದನ್ನು ಗೊತ್ತುಪಡಿಸಿ ಆಸ್ಪತ್ರೆಗೆ ದಾಖಲಿಸಿದರಾದರೂ, ಗಾಯಾಳು ಆದಂ ಇನ್ನೂ ಪ್ರಜ್ಞ್ಞಾಶೂನ್ಯ ಸ್ಥಿತಿಯಲ್ಲಿಯೇ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News