ಸರಕಾರಿ ಪಾಲಿಟೆಕ್ನಿಕ್ ಹಾಸ್ಟೆಲ್ ದುರಸ್ತಿ ಕಾಮಗಾರಿ ವೀಕ್ಷಣೆ

Update: 2017-01-16 11:54 GMT

ಮಂಗಳೂರು, ಜ.16: ನಾದುರಸ್ಥಿಯಲ್ಲಿದ್ದ ಕೆಪಿಟಿ ಹಾಸ್ಟೆಲ್‌ನ ದುರಸ್ತಿ ಕಾಮಗಾರಿಯನ್ನು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಸೋಮವಾರ ವೀಕ್ಷಿಸಿದರು.

80 ಲಕ್ಷ ರೂ. ವೆಚ್ಚದ ಈ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಸೂಚಿಸಿದ ಅವರು, ಹಾಸ್ಟೆಲ್‌ನ 2ನೆ ಹಂತದ ದುರಸ್ಥಿ ಕಾಮಗಾರಿ ಮತ್ತು ಪಾಲಿಟೆಕ್ನಿಕ್‌ನ ಕಾಮಗಾರಿಗೆ 1.25 ಕೋ.ರೂ. ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲು ಕಾಲೇಜು ಪ್ರಾಂಶುಪಾಲರಿಗೆ ಸೂಚಿಸಿದರು.

ಕೆಪಿಟಿಯಲ್ಲಿ ಸಂಜೆ ಪಾಲಿಟೆಕ್ನಿಕ್ ಪ್ರಾರಂಭಿಸಲು ಎ.ಐ.ಸಿ.ಟಿ. ಅನುಮೋದನೆ ನೀಡಿದೆ. ರಾಜ್ಯ ಸರಕಾರದ ಅನುಮೋದನೆಗಾಗಿ ಹಣಕಾಸು ಇಲಾಖೆಗೆ ಕಳುಹಿಸಿ ಕೊಡಲಾಗಿದೆ ಎಂದರು.,

  ಈ ಸಂದರ್ಭ ಪ್ರಾಂಶುಪಾಲ ಬಾಬು ದೇವಾಡಿಗ, ರಿಜಿಸ್ಟಾರ್ ರಾಜೇಂದ್ರ ಪ್ರಸಾದ್, ಸಿಲ್‌ಎಚ್‌ಒಡಿ ದೇವರ್ಸಿ ಗೌಡ, ನರಸಿಂಹ ಭಟ್, ಇಂಜಿನಿಯರ್ ಎಸ್. ಎಸ್. ಹೆಗಡೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News