ಜ.17: ಯೆನೆಪೊಯ ಕಾಲೇಜಿನಲ್ಲಿ ಚರ್ಚಾಗೋಷ್ಠಿ
Update: 2017-01-16 17:30 IST
ಮಂಗಳೂರು, ಜ.16: ಭಾರತದ ಆರ್ಥಿಕತೆಯ ಮೇಲೆ ನೋಟು ಅಮಾನ್ಯದ ಪರಿಣಾಮ ಎಂಬ ವಿಷಯದಲ್ಲಿ ಯೆನೆಪೊಯ ಪದವಿ ಕಾಲೇಜಿನಲ್ಲಿ ಜ.17ರಂದು ಜ.17ರಂದು ಪೂ.11ಕ್ಕೆ ಚರ್ಚಾಗೋಷ್ಠಿ ನಡೆಯಲಿದೆ.
ಯೆನೆಪೊಯ ಸಂಸ್ಥೆಯ ಹಣಕಾಸು ನಿರ್ದೇಶಕ ಫರ್ಹಾನ್ ಯೆನೆಪೊಯ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಪಿ ಯುವಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಬ್ರಿಜೇಶ್ ಚೌಟ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸುಹೈಲ್ ಕಂದುಕ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮಂಗಳೂರು ವಿವಿ ಹಣಕಾಸು ವಿಭಾಗದ ಅಧಿಕಾರಿ ಡಾ. ಶ್ರೀಪತಿ ಕಲ್ಲೂರಾಯ, ನಿವೃತ್ತ ಪ್ರೊ. ಡಾ. ಬಿ.ವಿ.ರಘುನಂದನ್ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.