×
Ad

ಶಿಸ್ತುಬದ್ಧ ಜೀವನಕ್ಕೆ ಎನ್ನೆಸ್ಸೆಸ್ ಸಹಕಾರಿ: ಡಾ.ಕರ್ನೇಲಿಯೋ

Update: 2017-01-16 18:57 IST

ಉಡುಪಿ, ಜ.16: ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಶಿಸ್ತುಬದ್ಧ ಜೀವನ ವನ್ನು ಅಳವಡಿಸಿಕೊಳ್ಳಬೇಕಾದರೆ ತಮ್ಮನ್ನು ಎನ್ನೆಸ್ಸೆಸ್‌ನಂತಹ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದು ವಿದ್ಯಾರ್ಥಿಗಳಿಗೆ ಸಮಾಜ ದಲ್ಲಿ ಎಲ್ಲರ ಜೊತೆ ಬೆರೆತು ಬದುಕುವ ಕಲೆಯನ್ನು ಕಲಿಸಿಕೊಡುವುದು ಮಾತ್ರವಲ್ಲದೆ ಶಿಸ್ತುಬದ್ಧ ಜೀವನವನ್ನು ರೂಪಿಸುತ್ತದೆ ಎಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ನೇರಿ ಕರ್ನೇಲಿಯೋ ಹೇಳಿದ್ದಾರೆ.

ಕೆಮ್ಮಣ್ಣು ಕಾರ್ಮಿಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ ವಹಿಸಿದ್ದರು. ಕಲ್ಯಾಣಪುರ ಲಯನ್ಸ್ ಅಧ್ಯಕ್ಷ ಟ್ವಾಲಬರ್ಟ್ ಡಿಸೋಜ, ಕಲ್ಯಾಣಪುರ ಜೆಸಿಐ ಅಧ್ಯಕ್ಷ ಪ್ರಶಾಂತ್ ಅಚಾರ್ಯ, ಹಿರಿಯಡ್ಕದ ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್‌ನ ಆಡಳಿತಾಧಿಕಾರಿ ಶೇಖರ ಗುಜ್ಜರಬೆಟ್ಟು ಮುಖ್ಯ ಅತಿಥಿಗಳಾಗಿದ್ದರು.

 ಎನ್‌ಎಸ್‌ಎಸ್ ಅಧಿಕಾರಿ ಅಂಪಾರು ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು. ಲಕ್ಷ್ಮೀಶ ಸ್ವಾಗತಿಸಿದರು. ಪ್ರಜ್ಞಾ ಶೆಟ್ಟಿ ವಂದಿಸಿದರು. ನಿರ್ಮಲಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News