ಜ.18-22;ನಗರದಲ್ಲಿ ಪ್ರಥಮ ಬಾರಿಗೆ ರಾಷ್ಟ್ರ ಮಟ್ಟದ 10ನೆ ಕಥೊಲಿಕ್ ಯುವ ಸಮಾವೇಶ
ಮಂಗಳೂರು,ಜ.16:ನಗರದಲ್ಲಿ ಜನವರಿ 18ರಿಂದ 22ರವರೆಗೆ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ 10ನೆ ಕಥೊಲಿಕ್ ಯುವ ಸಮಾವೇಶ ವಾಮಂಜೂರಿನ ಸಂತ ಜೋಸೆಫರ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.ದೇಶದ ವಿವಿಧ ಕಡೆಗಳಿಂದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಯುವ ಮುಖಂಡರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಸಿಬಿಸಿಐ ಯೂತ್ ಕೌನ್ಸಿಲ್‌ನ ಅಧ್ಯಕ್ಷ ಬಿಷಪ್ ಹೆನ್ರಿ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಇಂಡಿಯನ್ ಕಥೋಲಿಕ್ ಯೂತ್ ಮೂವ್‌ಮೆಂಟ್ (ಐಸಿವೈಎಂ)ಈ ಸಮಾ ವೇಶವನ್ನು ಆಯೋಜಿಸಿದ್ದು ಯೂಥ್ ಕೌನ್ಸಿಲ್ ಆಫ್ ಕಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ)ಇದಕ್ಕೆ ಸಹಯೋಗ ನೀಡಿದೆ.ಈ ಸಮಾವೇಶವನ್ನು ಕರ್ನಾಟಕ ವಲಯ,ಮಂಗಳೂರು ಡಯೋಸಿಸ್,ಉಡುಪಿ,ಬೆಳ್ತಂಗಡಿ ಹಾಗೂ ಪುತ್ತೂರು ಡಯಾಸೀಸ್ ಸಂಯುಕ್ತವಾಗಿ ವ್ಯವಸ್ಥೆಗೊಳಿಸಿದೆ.ಸಮಾವೇಶವನ್ನು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಉದ್ಘಾಟಿಸಲಿದ್ದಾರೆ.ಬೆಂಗಳೂರಿನ ಆರ್ಚ್ ಬಿಷಪ್ ಅತೀ ವಂದನೀಯ ಬರ್ನಾರ್ಡ್ ಮೊರಾಸ್ ಅಧ್ಯಕ್ಷತೆ ವಹಿಸಲಿದ್ದಾರೆ.ಸಂಸದ ನಳಿನ್ ಕುಮಾರ್ ಕಟೀಲ್ ಶಾಸಕರಾದ ಜೆ.ಆರ್.ಲೋಬೋ,ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಖ್ಯಾತ ಶಿಕ್ಷಣ ತಜ್ಞೆ ಗ್ರೇಸ್ ಪಿಂಟೋ ಪ್ರಧಾನ ಭಾ ಷಣ ಮಾಡಲಿದ್ದಾರೆ.ಸಿಬಿಸಿಐ ಅಧ್ಯಕ್ಷ ಕಾರ್ಡಿನಲ್ ಬಸೇಲಿಯಸ್ ಕ್ಲೀಮಿಸ್,ಏರ್ನಾಕುಲಂನ ಮೇಜರ್ ಆರ್ಚ್ ಬಿಷಪ್ ಕಾರ್ಡಿನಲ್ ಜಾರ್ಜ್ ಆಲೆಂಚೆರ್ರಿ,ಫೆಡರೇಶನ್ ಆಫ್ ಏಷ್ಯನ್ ಬಿಷಪ್ಸ್ ಕಾನ್ಫರೆನ್ಸ್ ಅಧ್ಯಕ್ಷ ಹಾಗೂ ಮುಂಬೈ ಆರ್ಚ್ ಬಿಷಪ್ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಸ್ ಮಾತನಾಡಲಿರುವರು ಬಿಷಪ್ ಹೆನ್ರಿ ಡಿ ಸೋಜ ತಿಳಿಸಿದ್ದಾರೆ.
ಜ.22ರಂದು ಬೃಹತ್ ರ್ಯಾಲಿ,ಸಮಾವೇಶ ಸಮಾರೋಪ:-ಜನರಿ 22ರಂದು ರೋಸಾರಿಯೋ ಕಥಡ್ರಲ್‌ನಿಂದ ಆರಂಭವಾಗಲಿರುವ ಎಂಟು ಸಾವಿರಕ್ಕೂ ಅಧಿಕ ಯುವಕರನ್ನೊಳಗೊಂಡ ರ್ಯಾಲಿ ಸಂತ ಅಲೋಶಿಯಸ್ ಮೈದಾನದಲ್ಲಿ ಕೊನೆಗೊಳ್ಳಲಿದೆ. ಈ ಸಮಾರಂಭದಲ್ಲಿ ಭಾಗವಹಿಸಲಿರುವ ಸುಪ್ರೀಂ ಕೊರ್ಟ್‌ನ ನ್ಯಾಯಮೂರ್ತಿ ಜೋಸೆಫ್ ಕುರಿಯನ್ ಸಂವಿಧಾನಾತ್ಮಕ ಹಕ್ಕು ಮತ್ತು ಕರ್ತವ್ಯಗಳು ಯುವಕರ ಜವಾಬ್ದಾರಿ ಎಂಬವಿಷಯವಾಗಿ ಮಾತ ನಾಡಲಿರುವರು.ಮೂರು ವರುಷಗಳಿಗೊಮ್ಮೆ ನಡೆಯಲಿರುವ ಈ ಸಮಾವೇಶದಲ್ಲಿ ಯುವಕರ ಸ್ವ ವೌಲ್ಯ ಮಾಪನ,ಪರಿಸರ,ಧಾರ್ಮಿಕ ಸಾಮರಸ್ಯ ಮತ್ತು ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳಲು ನೆರವಾಗುತ್ತದೆ ಎಂದು ಬಿಷಪ್ ಹೆನ್ರಿ ಡಿ ಸೋಜ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿ ಸೋಜ,ಸಿಬಿಸಿಐ ಯೂತ್ ಕೌನ್ಸಿಲ್‌ನ ಪದಾಧಿಕಾರಿಗಳಾದ ವಂ.ದೀಪಕ್ ಥಾಮಸ್,ವಂ.ಮರಿ ಜೋಸೆಫ್,ಸಿಜೋ ಅಂಬಟ್ಟ್‌ವಿಫಿನ್ ಪೌಲ್,ಜೆನ್ನಿ ಜಾಯ್ ವಂ.ರೋನಾಲ್ಡ್ ಡಿ ಸೋಜ,ಜಾಕ್ಸನ್ ಡಿ ಕೋಸ್ಟ ಮೊದಲಾದವರು ಉಪಸ್ಥಿತರಿದ್ದರು.