×
Ad

ಜ.17: ಎಸ್ಸಿ-ಎಸ್ಟಿ : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Update: 2017-01-16 19:31 IST

ಮಂಗಳೂರು, ಜ.16: ದ.ಕ. ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭಿವೃದ್ಧಿ ಸಮುದಾಯದ ಪ್ರಗತಿಗೆ ವಿವಿಧ ಕಾಮಗಾರಿಗಳಿಗೆ ಜ.17ರಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಚಾಲನೆ ನೀಡಲಿದ್ದಾರೆ.

  ಸಮಾಜ ಕಲ್ಯಾಣ ಇಲಾಖೆಯ 23.03 ಕೋ.ರೂ. ಹಾಗೂ ಕೊರಗ ಕಾಲನಿಗಳ ಅಭಿವೃದ್ಧಿಗೆ 6.74 ಕೋ.ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ದೊರಕಲಿದೆ. ನಗರದಲ್ಲಿ ಸುಮಾರು 12 ಕೋ.ರೂ. ವೆಚ್ಚದಲ್ಲಿ ಜಿಲ್ಲಾಮಟ್ಟದ ಅಂಬೇಡ್ಕರ್ ಭವನ ಕಾಮಗಾರಿ, 31 ಲಕ್ಷ ರೂ. ವೆಚ್ಚದಲ್ಲಿ ಗಡಿಪ್ರದೇಶದ ಕಾಮಗಾರಿ, 3.96 ಕೋ.ರೂ. ವೆಚ್ಚದಲ್ಲಿ ಉರ್ವಾ ಮಾರಿಗುಡಿಯಲ್ಲಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟನೆಯಾಗಲಿದೆ.

 ಬಂಟ್ವಾಳ ತಾಲೂಕಿ ಬಿ.ಸಿ. ರೋಡ್‌ನಲ್ಲಿ 1.50 ಕೋ.ರೂ. ವೆಚ್ಚದಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್ ಭವನ, ಕಕ್ಕೆಪದವು ಹಾಗೂ ಚೆನೈತ್ತೋಡಿಯಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಹೋಬಳಿ ಮಟ್ಟದ ಅಂಬೇಡ್ಕರ್ ಭವನ, 31 ಲಕ್ಷ ವೆಚ್ಚದಲ್ಲಿ ಗಡಿ ಪ್ರದೇಶದ ಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.

ಪುತ್ತೂರು ತಾಲೂಕಿನಲ್ಲಿ 74 ಲಕ್ಷ ರೂ.ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, 31 ಲಕ್ಷ ರೂ. ವೆಚ್ಚದಲ್ಲಿ ಗಡಿ ಪ್ರದೇಶದ ಕಾಮಗಾರಿ, 20 ಲಕ್ಷ ರೂ. ವೆಚ್ಚದಲ್ಲಿ ನೆಟ್ಟಣಿಗೆ ಮುಡ್ನೂರು ಸ್ಮಶಾನ ಭೂಮಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರಕಲಿದೆ.

ಸುಳ್ಯ ತಾಲೂಕಿನಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ, 75 ಲಕ್ಷ ರೂ. ವೆಚ್ಚದಲ್ಲಿ ಗಡಿ ಪ್ರದೇಶದ ಕಾಮಗಾರಿ, 1.20 ಕೋ.ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ (10 ಕಾಮಗಾರಿ) ಹಾಗೂ ಅಜ್ಜ್ಜಾವರ ಗ್ರಾಪಂ ವ್ಯಾಪ್ತಿಯ ಅರ್ಹ 35 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ನಡೆಯಲಿದೆ.

* ಈಡೇರಲಿದೆ ಸಚಿವರ ಭರವಸೆ: ಕಳೆದ ವರ್ಷ ಎ.15ರಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಹಳೆಯಂಗಡಿ ಸುೀಪದ ಕೆರೆಕಾಡು ಎಂಬಲ್ಲಿ ಕೊರಗರ ಕಾಲನಿಯಲ್ಲಿ ವಾಸ್ತವ್ಯ ಹೂಡಿದ್ದಾಗ ಕೊರಗ ಸಮುದಾಯದ ಕಲ್ಯಾಣಕ್ಕೆ ಹಲವಾರು ಘೋಷಣೆಗಳನ್ನು ಮಾಡಿದ್ದರು. ಇದರನ್ವಯ ಸುಮಾರು 6.74 ಕೋ.ರೂ. ವೆಚ್ಚದ ಧ ಕಾಮಗಾರಿಗಳಿಗೆ ಮಂಗಳವಾರ ಶಂಕುಸ್ಥಾಪನೆಯಾಗಲಿದೆ.

   ಮಂಗಳೂರು ತಾಲೂಕಿನ ಕೊರಗ ಕಾಲನಿಗಳ ರಸ್ತೆ ಕಾಂಕ್ರಿಟೀಕರಣ ಮತ್ತು ಸಮುದಾಯ ಭವನಗಳಿಗೆ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ 3.65 ಕೋ.ರೂ.ವೆಚ್ಚದಲ್ಲಿ 17 ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಲಿದ್ದಾರೆ. ಅಲ್ಲದೆ ಬಂಟ್ವಾಳ ತಾಲೂಕಿನಲ್ಲಿ ಕೊರಗ ಕಾಲನಿಗಳ ರಸ್ತೆ ಕಾಂಕ್ರಿಟೀಕರಣಕ್ಕೆ 1.50 ಕೋ.ರೂ. ವೆಚ್ಚದಲ್ಲಿ 7 ಕಾಮಗಾರಿಗಳು ಹಾಗೂ ಪುತ್ತೂರು ತಾಲೂಕಿನ ಕೊರಗ ಕಾಲೊನಿಗಳ ರಸ್ತೆ ಕಾಂಕ್ರಿಟಿಕರಣಲ್ಲಿ 1.59 ಕೋ.ರೂ. ವೆಚ್ಚದಲ್ಲಿ 10 ಕಾಮಗಾರಿಗಳ ಶಂಕುಸ್ಥಾಪನೆಯನ್ನು ಸಚಿವರು ನೆರವೇರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News