×
Ad

ಕೇರಳದ 4 ಬಿಜೆಪಿ ನಾಯಕರಿಗೆ ವೈ ಕೆಟಗರಿ ಸುರಕ್ಷತೆ

Update: 2017-01-16 19:33 IST

ಹೊಸದಿಲ್ಲಿ,ಜ.16: ಕೇರಳದ ನಾಲ್ವರು ಬಿಜೆಪಿ ನಾಯಕರಿಗೆ ವೈಕೆಟಗರಿ ಭದ್ರತೆಯನ್ನು ಒದಗಿಸಬೇಕೆಂದು ರಾಜ್ಯ ಬಿಜೆಪಿ ಸಮಿತಿ ಸಲ್ಲಿಸಿದ ಬೇಡಿಕೆಯನ್ನು ಕೇಂದ್ರ ಸರಕಾರ ಪುರಸ್ಕರಿಸಿದೆ.ಬಿಜೆಪಿ ರಾಜ್ಯ ಅಧ್ಯಕ್ಷ ಕುಮ್ಮನಂ ರಾಜಶೇಖರನ್, ಮಾಜಿ ಅಧ್ಯಕ್ಷ ಪಿ.ಕೆ. ಕೃಷ್ಣದಾಸ್, ಪ್ರಧಾನ ಕಾರ್ಯದರ್ಶಿ. ಎಂ.ಟಿ. ರಮೇಶ್, ಕೆ.ಸುರೇಂದ್ರನ್‌ರಿಗೆ ವೈ ಕೆಟಗರಿ ಸುರಕ್ಷೆ ಒದಗಿಸಲಾಗಿದೆ. ಕಮ್ಯುನಿಸ್ಟ್ ಪಕ್ಷ ಅಧಿಕಾರದಲ್ಲಿ ಬಂದ ಬಳಿಕ ಈ ನಾಯಕರಿಗೆ ಬೆದರಿಕೆಗಳಿವೆ. ಆದ್ದರಿಂದ ಇವರಿಗೆ ವೈಕೆಟಗರಿ ಭದ್ರತೆ ನೀಡಬೇಕೆಂದು ಕೇರಳ ಬಿಜೆಪಿ ಆಗ್ರಹಿಸಿತ್ತು.

ಎರಡು ವಾರ ಮೊದಲು ಇದಕ್ಕೆ ಸಂಬಂಧಿಸಿ ಆದೇಶ ಹೊರಡಿಸಲಾಗಿದೆ ಎಂದು ದಿ ಹಿಂದೂ ಪತ್ರಿಕೆ ವರದಿಮಾಡಿದೆ. ವೈಕೆಟಗರಿ ಸುರಕ್ಷ ಪ್ರಕಾರ ಹನ್ನೆರಡು ಗಾರ್ಡ್‌ಗಳು ಈ ನಾಯಕರನ್ನು ಹಿಂಬಾಲಿಸಲಿದ್ದಾರೆ. ಕಳೆದ ವರ್ಷ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ 400 ದಾಳಿಗಳು ನಡೆದಿವೆ ಎಂದು ಬಿಜೆಪಿ ನಾಯಕರುಹೇಳುತ್ತಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News