×
Ad

ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ : ನ್ಯಾಯಕ್ಕೆ ಆಗ್ರಹಿಸಿ ಮೇಣದ ಬೆಳಕಿನ ಪ್ರತಿಭಟನೆ

Update: 2017-01-16 19:53 IST

ಉಡುಪಿ,ಜ.16:ಹೈದರಾಬಾದಿನ ಕೇಂದ್ರಿಯ ವಿವಿಯ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡು ನಾಳೆಗೆ ಒಂದು ವರ್ಷವಾಗಲಿದ್ದು, ಪ್ರತಿಭಾವಂತ ದಲಿತ ವಿದ್ಯಾರ್ಥಿಯ ಸಾವಿಗೆ ನ್ಯಾಯವನ್ನು ಆಗ್ರಹಿಸಿ ಉಡುಪಿ ಜಿಲ್ಲಾ ದಲಿತ-ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ನಾಳೆ ಸಂಜೆ ನಗರದ ಕ್ಲಾಕ್‌ಟವರ್ ಎದುರು ಮೇಣದ ಬೆಳಕಿನ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

 ವಿವಿಯ ದಬ್ಬಾಳಿಕೆಯಿಂದ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಹಾಗೂ ವಿವಿಯ ಕುಲಪತಿ ಅಪ್ಪಾರಾವ್ ಮತ್ತಿತರರು ಆರೋಪಿ ಗಳೆಂದು, ಅವರ ವಿರುದ್ಧ ತನಿಖೆ ನಡೆಯಬೇೆಂದು ಹಕ್ಕೊತ್ತಾಯ ಮಾಡಲಾಗಿತ್ತು.

ರೋಹಿತ್ ವೇಮುಲಾ ಸಾವಿನ ನ್ಯಾಯಕ್ಕಾಗಿ ದಲಿತ-ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ಸಂಘಟನೆಗಳವರು ಕೈಜೋಡಿಸಿ ಹೋರಾಟದಲ್ಲಿ ಜೊತೆಯಾಗಬೇಕೆಂದು ಸಮಿತಿ ವಿನಂತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News