ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು
Update: 2017-01-16 20:49 IST
ಕೋಟ, ಜ.16: ಹೊಂಬಾಡಿ ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಎಂಬಲ್ಲಿ ಜ.16ರಂದು ಬೆಳಗ್ಗೆ 9:45ರ ಸುಮಾರಿಗೆ ಹೊಸದಾಗಿ ನಿರ್ಮಿಸಲಾಗುತ್ತಿ ರುವ ಕಟ್ಟಡದ ಒಂದನೆ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ರೊಬ್ಬರು ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಮೃತರನ್ನು ಹಂಗಳೂರು ಗ್ರಾಮದ ನೇರಂಬಳ್ಳಿಯ ಶೀನ ಪೂಜಾರಿ ಎಂಬವರ ಮಗ ಜೋಗ ಪೂಜಾರಿ(38) ಎಂದು ಗುರುತಿಸಲಾಗಿದೆ. ಇವರು ಹೆಗ್ಡೆ ಬಾರ್‌ನ ಹಿಂಬದಿಯಲ್ಲಿ ಹೊಸದಾಗಿ ನಿರ್ಮಾಣ ಮಾಡುತ್ತಿದ್ದ ಕಟ್ಟಡದ ಒಂದನೆ ಮಹಡಿಯ ಗೋಡೆಯ ಹೊರ ಭಾಗದ ಕಿಟಕಿಯ ಕೆಲಸ ಮಾಡುವಾಗ ಅಟ್ಟಣಿಗೆಯಿಂದ ಆಕಸ್ಮಿಕವಾಗಿ ಕಾಲುಜಾರಿ ಕೆಳಕ್ಕೆ ಬಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.