×
Ad

ರಸ್ತೆ ಬದಿ ಬಿದ್ದಿದ್ದ ಯುವತಿಯನ್ನು ಮನೆಗೆ ತಲುಪಿಸಿ ಮಾನವೀಯತೆ ಮೆರೆದ ತಾ.ಪಂ ಅಧ್ಯಕ್ಷ

Update: 2017-01-16 21:37 IST

ಕೊಣಾಜೆ, ಜ.16: ಬಿಸಿಲ ತಾಪಕ್ಕೆ ತಲೆ ತಿರುಗಿ ಬಿದ್ದು ಒದ್ದಾಡುತ್ತಿದ್ದ ಯುವತಿಯೊರ್ವಳನ್ನು ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಂಗಳೂರು ತಾಪಂ ಅಧ್ಯಕ್ಷ ಮಹಮ್ಮದ್ ಮೋನು ತಮ್ಮ ವಾಹನದಲ್ಲಿ ಕುಳ್ಳಿರಿಸಿ ಆಕೆಯ ಮನೆ ಸೇರಿಸುವ ಮೂಲಕ ಮಾನವೀಯತೆ ಮೆರೆದರು ಎಂದು ತಿಳಿದು ಬಂದಿದೆ.

    ಸುಮಾರು 28ರ ಹರೆಯದ ಅಸೈಗೋಳಿ ಸಮೀಪದ ಯುವತಿಯು ನಡೆದುಕೊಂಡು ಹೋಗುತ್ತಿದ್ದಾಗ ಕೊಣಾಜೆ ಸಮೀಪದ ಗಣೇಶ್ ಮಹಲ್ ಬಳಿ ಬಿದ್ದುಕೊಂಡಿದ್ದರು. ಕಾನೂನು ಅಡ್ಡಿಯಾಗುವುದೆಂಬ ಭಯದಿಂದ ವಾಹನ ಸವಾರರಾಗಲಿ, ಪಾದಚಾರಿಗಳಾಗಲಿ ಆಕೆಯನ್ನು ಮೇಲೆತ್ತುವ ಪ್ರಯತ್ನವನ್ನು ಮಾಡಲಿಲ್ಲ. ಇನ್ನೊಂದೆಡೆ ಯುವತಿ ಸಮುದಾಯದವರು ಅಡ್ಡಿಯಾಗುವುದೆಂಬ ಭೀತಿಯಿಂದ ಹಲವರು ಒಂದು ಕ್ಷಣ ವಾಹನ ನಿಲ್ಲಿಸಿದರೂ ಮತ್ತೆ ಆಕೆಯನ್ನು ನೋಡಿ ಸ್ಥಳದಿಂದ ಕಾಲ್ಕಿತ್ತಿದ್ದರು. ಈ ನಡುವೆ ಮಂಗಳೂರು ತಾಪಂ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ತಮ್ಮ ಸರಕಾರಿ ವಾಹನದಲ್ಲಿ ಇದೇ ರಸ್ತೆಯಲ್ಲಿ ಬರುತ್ತಿದ್ದರು.

ಅವರು ವಾಹನವನ್ನು ನಿಲ್ಲಿಸಿ ರಸ್ತೆ ಬದಿಯಲ್ಲಿ ಸುಡುಬಿಸಿಲಿನಲ್ಲಿ ನರಳಾಡುತ್ತಿದ್ದ ಯುವತಿಯ ಮಾಹಿತಿ ಕೇಳಿದರೂ ಆಕೆ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಸಮೀಪದ ಬಸ್ಸು ನಿಲ್ದಾಣಕ್ಕೆ ತಾಪಂ ಅಧ್ಯಕ್ಷರು ಸಹಿತ ಇತರರು ಕರೆತಂದು ನೀರು ಕುಡಿಸಿದರು. ಬಳಿಕ ಕೊಣಾಜೆ ಪೊಲೀಸ್ ಠಾಣೆಗೂ ಮಾಹಿತಿಯನ್ನು ನೀಡಲಾಗಿತ್ತು.

  ಆದರೆ ಸ್ಥಳಕ್ಕೆ ಓರ್ವ ಪೊಲೀಸ್ ಪೇದೆ ಆಗಮಿಸಿದ್ದರಿಂದಾಗಿ ಯುವತಿಯನ್ನು ಮನೆಗೆ ಸೇರಿಸಲು ಅಸಾಧ್ಯವಾಗಿತ್ತು. ಅದರಂತೆ ಪೊಲೀಸ್ ಪೇದೆಯನ್ನು ತಮ್ಮ ವಾಹನದ ಜತೆಗೆ ಬರುವಂತೆ ತಿಳಿಸಿ ಯುವತಿಯನ್ನು ಅಸೈಗೋಳಿ ಸಮೀಪದ ಮನೆಗೆ ತಲುಪಿಸಿ ಮಾನವೀಯತೆ ಮೆರೆದರು ಎಂದು ತಿಳಿದು ಬಂದಿದೆ.

 ತಾಪಂ ಅಧ್ಯಕ್ಷರ ಜೊತೆ ಪತ್ರಕರ್ತರೂ ಯುವತಿಯನ್ನು ಮನೆ ಸೇರಿಸುವಲ್ಲಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News