×
Ad

ಮಲ್ಪೆ: 29ಕ್ಕೆ ಮುಕ್ತ ತುಳು ಫಿಲ್ಮ್ ಅವಾರ್ಡ್

Update: 2017-01-16 21:50 IST

ಉಡುಪಿ, ಜ.16: ಉಡುಪಿ ಮೂಲದ ಮುಕ್ತ ಟಿವಿ ಹಮ್ಮಿಕೊಂಡಿರುವ ‘ಮುಕ್ತ ತುಳು ಫಿಲ್ಮ್ ಅವಾರ್ಡ್’ ಕಾರ್ಯಕ್ರಮ ಇದೇ ಜ.29ರ ರವಿವಾರ ಸಂಜೆ ಮಲ್ಪೆಯ ಸಮುದ್ರ ಕಿನಾರೆಯಲ್ಲಿ ನಡೆಯಲಿದೆ ಎಂದು ಮುಕ್ತ ಟಿವಿ ಆಡಳಿತ ನಿರ್ದೇಶಕ ವಿವೇಕ ಸುವರ್ಣ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ಸಿನಿಮಾ ಪ್ರಶಸ್ತಿಗಳ ಪೈಕಿ ಜನಮೆಚ್ಚಿದ ನಾಯಕ ನಟ, ಜನ ಮೆಚ್ಚಿದ ನಾಯಕಿ ನಟಿ ಹಾಗೂ ಜನ ಮೆಚ್ಚಿದ ಹಾಸ್ಯನಟ ಪ್ರಶಸ್ತಿಗಳನ್ನು ಜನರ ಆಯ್ಕೆಗೆ ಬಿಡಲಾಗಿದ್ದು, ಇದಕ್ಕಾಗಿ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌ನಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ ಎಂದರು.

 ಮುಕ್ತ ಟಿವಿ ಇದರ ಅಧಿಕೃತ ಪೇಜ್‌ನಲ್ಲಿ ಕಳೆದ ವರ್ಷ ಬಿಡುಗಡೆಯಾದ (2016) ಎಲ್ಲಾ ತುಳುಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ ನಾಯಕ ನಟ, ನಾಯಕ ನಟಿ ಹಾಗೂ ಹಾಸ್ಯ ಕಲಾವಿದರ ಚಿತ್ರಗಳನ್ನು ಪ್ರಕಟಿಸಲಾಗಿದ್ದು, ಮತದಾನ ಮಾಡುವಂತೆ ಸಾರ್ವಜನಿಕರನ್ನು ವಿವೇಕ ಸುವರ್ಣ ಕೋರಿದರು.

ಈಗಾಗಲೇ ಸಾವಿರಾರು ಮಂದಿ ತಮ್ಮ ನೆಚ್ಚಿನ ಕಲಾವಿದರಿಗೆ ಮತದಾನ ಮಾಡಿದ್ದು, ಆಸಕ್ತರು ಅಧಿಕೃತ ಪೇಸ್‌ಬುಕ್ ಪೇಜ್‌ನಲ್ಲಿ ತಮ್ಮ ನೆಚ್ಚಿನ ನಟ,ನಟಿ, ಹಾಸ್ಯನಟನಿಗೆ ಮತದಾನ ಮಾಡುವಂತೆ ತಿಳಿಸಿದರು. ಇದಕ್ಕಾಗಿ ಕಲಾಭಿಮಾನಿ ಗಳು ನೇರವಾಗಿ ಮುಕ್ತ ಟಿವಿಯ ಅಧಿಕೃತ ಫೇಸ್‌ಪೇಜ್‌ಗೆ ಬಂದು ಮತದಾನ ಮಾಡಬೇಕು. ಬೇರೆಯವರು ಶೇರ್ ಮಾಡಿದ ಪೋಟೊವನ್ನು ಲೈಕ್ ಮಾಡಿದರೆ ಅದನ್ನು ಪರಿಗಣಿಸುವುದಿಲ್ಲ. ಕೊನೆಯ ಕ್ಷಣದವರೆಗೂ ಮತದಾನಕ್ಕೆ ಅವಕಾಶವಿದೆ ಎಂದು ವಿವೇಕ್ ಸುವರ್ಣ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಡಳಿತ ವ್ಯವಸ್ಥಾಪಕ ಅಶ್ವಥ್ ಕಾಂಚನ್, ಸುದ್ದಿ ಸಂಪಾದಕ ಶ್ರೀಕಾಂತ್ ಶೆಟ್ಟಿ, ಮುಖ್ಯ ವರದಿಗಾರ ಪ್ರಜ್ವಲ್ ಅಮೀನ್ ಹಾಗೂ ಮಂಗಳೂರು ವರದಿಗಾರ ಪ್ರತೀಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News