×
Ad

ಬ್ರೆಝಿಲ್ ಜೈಲಿನಲ್ಲಿ ಮತ್ತೆ ನರಮೇಧ: 26 ಕೈದಿಗಳ ಹತ್ಯೆ

Update: 2017-01-16 22:09 IST

ನತಾಲ್(ಬ್ರೆಝಿಲ್),ಜ.16: ಬ್ರೆಝಿಲ್‌ನ ಕಾರಾಗೃಹಗಳಲ್ಲಿ ನಡೆಯುತ್ತಿರುವ ಸರಣಿ ಹತ್ಯಾಕಾಂಡಕ್ಕೆ ಹೊಸ ಸೇರ್ಪಡೆಯೆಂಬಂತೆ, ನತಾಲ್ ಪಟ್ಟಣದ ಜೈಲಿನಲ್ಲಿ ಶನಿವಾರ ನಡೆದ ಗ್ಯಾಂಗ್‌ವಾರ್‌ನಲ್ಲಿ 26 ಕೈದಿಗಳು ಬಲಿಯಾಗಿದ್ದಾರೆ. ಅವರಲ್ಲಿ ಬಹುತೇಕ ಮಂದಿಯನ್ನು ರುಂಡ ಕಡಿದು ಬರ್ಬರವಾಗಿ ಕೊಲ್ಲಲಾಗಿದೆಯೆಂದು ತಿಳಿದುಬಂದಿದೆ

ಖೈದಿಗಳನ್ನು ಮಿತಿ ಮೀರಿದ ತುರುಕಿಸಿರುವ ಅಲಾಕುಝ್ ಜೈಲೊಂದರಲ್ಲಿ ಶನಿವಾರ ರಾತ್ರಿ ಕೈದಿಗಳ ನಡುವೆ ಗುಂಪು ಘರ್ಷಣೆ ಭುಗಿಲೆದ್ದಿತೆಂದು ಅಧಿಕೃತ ಮೂಲಗಳು ತಿಳಿಸಿವೆ. ಸುಮಾರು 14 ತಾಸುಗಳವರೆಗೆ ಗಲಭೆ ನಡೆದಿದ್ದು, ಬೆಳಗ್ಗಿನ ವೇಳೆಗೆ ಭದ್ರತಾಪಡೆಗಳು ಧಾವಿಸಿ ಪರಿಸ್ಥಿತಿಯನ್ನು ತಹಬದಿಗೆ ತಂದವೆಂದು ಅವು ಹೇಳಿವೆ. ಮಾದಕದ್ರವ್ಯ ಮಾರಾಟ ಜಾಲಕ್ಕೆ ಸೇರಿದ ಎರಡು ಗ್ಯಾಂಗ್‌ಗಳು ಜೈಲಿನ ವಿವಿಧೆಡೆ ಮಾರಕ ಶಸ್ತ್ರಾಸ್ತ್ರಗಳೊಂದಿಗೆ ಪರಸ್ಪರ ಕಾಳಕ್ಕಿಳಿದರೆಂದು ಬ್ರೆಜಿಲ್‌ನ ಸಾರ್ವಜನಿಕ ಸುರಕ್ಷತಾ ನಿರ್ವಾಹಕ ಕೈಯೊ ಬೆಝೆರಾ ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಬ್ರೆಝಿಲ್‌ನ ವಿವಿಧ ಜೈಲುಗಳಲ್ಲಿ ನಡೆದ ಇದೇ ರೀತಿ ಹಿಂಸಾಚಾರಗಳಲ್ಲಿ ನೂರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News