ಮೆಕ್ಸಿಕೊ ನೈಟ್‌ಕ್ಲಬ್‌ನಲ್ಲಿ ಶೂಟೌಟ್‌ಗೆ 5 ಬಲಿ
Update: 2017-01-16 22:16 IST
ಕ್ಯಾನ್‌ಕುನ್(ಮೆಕ್ಸಿಕೊ),ಜ.16: ಇಲ್ಲಿನ ನೈಟ್‌ಕ್ಲಬ್ ಒಂದರಲ್ಲ್ಲಿ ಸೋಮವಾರ ನಸುಕಿನಲ್ಲಿ ನಡೆದ ಶೂಟೌಟ್‌ನಲ್ಲಿ ಐವರು ಮೃತಪಟ್ಟಿದ್ದು, ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ. ಭಯಗ್ರಸ್ತ ಜನತೆ ದಿಕ್ಕುಪಾಲಾಗಿ ಓಡಿದಾಗ ಕಾಲ್ತುಳಿತ ಸಂಭವಿಸಿದ್ದರಿಂದಲೂ ಕೆಲವರು ಗಾಯಗಳಾಗಿವೆ. ಮೃತರಲ್ಲಿ ಮೂವರು ವಿದೇಶಿಯರೆಂದು ತಿಳಿದುಬಂದಿದೆ.
ನೈಟ್‌ಕ್ಲಬ್‌ನಲ್ಲಿ ಸಂಗೀತಗೋಷ್ಠಿ ನಡೆಯುತ್ತಿದ್ದಾಗ ವ್ಯಕ್ತಿಯೊಬ್ಬ ಅಲ್ಲಿದ್ದವರ ಮೇಲೆ ಮನಬಂದಂತೆ ಗುಂಡುಹಾರಿಸಿರುವುದಾಗಿ ತಮಗೆ ಮಾಹಿತಿಗಳು ಲಭ್ಯವಾಗಿವೆಯೆಂದು ಕ್ಯಾನ್‌ಕುನ್ ನಗರದ ಮೇಯರಕ್ರಿಸ್ಟಿನಾ ಟೊರೆಸ್ ತಿಳಿಸಿದ್ದಾರೆ.ಹಂತಕನ ಪತ್ತೆಗಾಗಿ ಪೊಲೀಸರು ಭಾರೀ ಜಾಲವನ್ನು ಬೀಸಿದ್ದಾರೆಂದು ಅವರು ಹೇಳಿದ್ದಾರೆ.
ಖ್ಯಾತ ಬೀಚ್ ವಿಹಾರಧಾಮವಾದ ಪ್ಲಾಯಾ ಡೆಲ್ ಕಾರ್ಮೆನ್‌ನಲ್ಲಿರುವ ಈ ನೈಟ್‌ಕ್ಲಬ್‌ಗೆ ಅಮೆರಿಕನ್ ಹಾಗೂ ಯುರೋಪಿಯನ್ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಬೇಟಿ ನೀಡುತ್ತಿದ್ದಾರೆ.