×
Ad

ನಗದು ರಹಿತ ವ್ಯವಹಾರ: ಶ್ರೀ ಧವಲಾ ಕಾಲೇಜಿನಲ್ಲಿ ಪ್ರಾಯೋಗಿಕ ತರಬೇತಿ

Update: 2017-01-16 22:27 IST

ಮೂಡುಬಿದಿರೆ,ಜ.16: ಶ್ರೀ ಧವಲಾ ಕಾಲೇಜು ಮೂಡಬಿದಿರೆಯ ಇಂಟರ್ನಲ್ ಕ್ವಾಲಿಟಿ ಎಸ್ಸುರೆನ್ ಸೆಲ್ ಇದರ ಆಶ್ರಯದಲ್ಲಿ ಡಿಜಿಟಲ್ ಅರ್ಥವ್ಯವಸ್ಥೆಯಲ್ಲಿ ನಗದು ರಹಿತ ವ್ಯವಹಾರ ಎಂಬ ವಿಷಯದ ಬಗ್ಗೆ ಕಾಲೇಜಿನ ಪ್ರಾಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ಜರುಗಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಮೂಡಬಿದಿರೆಯ ಸಿಂಡಿಕೇಟ್ ಬ್ಯಾಂಕ್‌ನ ಅಸಿಸ್ಟೆಂಟ್ ಮ್ಯಾನೇಜರ್ ಸತ್ಯಜಿತ್ ಹಾಗೂ ಅಧಿಕಾರಿ ಗೌತಮ್, ನಗದು ಪಾವತಿಯ ವಿವಿಧ ರೀತಿಗಳಾದ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಎಸ್.ಎಂ.ಎಸ್. ಬ್ಯಾಂಕಿಂಗ್ , ವ್ಯಾಲೆಟ್ ಸಹಿತ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.

ಆಂತರಿಕ ಗುಣಮಟ್ಟ ಭರವಸೆ ಘಟಕದ ಸಂಯೋಜನಾಧಿಕಾರಿ ಪ್ರೊ.ಸುದರ್ಶನ್ ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ.ಎಂ. ರವೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರೋ.ಸಂತೋಷ್ ಶೆಟ್ಟಿ ವಂದಿಸಿದರು.

ನಗದುರಹಿತದಿಂದ ಕ್ಷಿಪ್ರ ಸೇವೆ:

 ನಗದು ರಹಿತ ವ್ಯವಹಾರ ಮಾಡಲು ಗ್ರಾಹಕರು ಮೊದಲಾಗಿ ಬ್ಯಾಂಕ್‌ಗಳಲ್ಲಿ ನೇರವಾಗಿ ಅಥವಾ ಎಸ್.ಎಂ.ಎಸ್. ಮೂಲಕ ನೋಂದಾವಣೆ ಮಾಡಲಾಗುತ್ತದೆ. ನಗದು ರಹಿತ ವ್ಯವಹಾರ ಮಾಡಲು ಗ್ರಾಹಕರು ಮೊದಲಾಗಿ ಬ್ಯಾಂಕ್‌ಗಳಲ್ಲಿ ನೇರವಾಗಿ ಅಥವಾ ಎಸ್.ಎಂ.ಎಸ್. ಮೂಲಕ ನೋಂದಾವಣೆ ಮಾಡಬೇಕಾಗುತ್ತದೆ. ನಗದು ರಹಿತ ವ್ಯವಹಾರದ ಮೇಲ್ವಿಚಾರಣೆ ಮಾಡುವ ಕೆಲಸವನ್ನು ಭಾರತದಲ್ಲಿ ನೇಷನಲ್ ಪೇಮೆಂಟ್ ಕಾರ್ಪೋರೇಶನ್ ಮಾಡುತ್ತಿದ್ದು, ಗ್ರಾಹಕರಿಗೆ ಭದ್ರತೆಯನ್ನು ನೀಡುವ ಜವಬ್ದಾರಿಯನ್ನು ವಹಿಸಿಕೊಂಡಿದೆ. ಡಿಜಿಟಲ್ ಬ್ಯಾಂಕಿಗ್ ಅನೇಕ ರೀತಿಯ ಅನುಕೂಲತೆಗಳಾದ, ಸಮಯದ ಉಳಿತಾಯ ಕ್ಷಿಪ್ರ ವರ್ಗಾವಣೆ, ಕಡಿಮೆ ಪೇಪರ್ ಬಳಕೆ, ತೆರಿಗೆ ಸಂಗ್ರಹಣೆಯಲ್ಲಿ ವೃದ್ಧಿ, ಪಾರದರ್ಶಕತೆ, ಮುಂತಾದವುಗಳಿಗೆ ಸಹಾಯಕವಾಗಿದೆ ಎಂದು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News