×
Ad

ಎಸ್ ಎಸ್ ಎಫ್ ಬಂಟ್ವಾಳ ಸೆಕ್ಟರ್ ಮಹಾಸಭೆ

Update: 2017-01-16 22:38 IST

ಬಂಟ್ವಾಳ,ಜ.16: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಬಂಟ್ವಾಳ ಸೆಕ್ಟರ್  ಇದರ ಮಹಾಸಭೆಯು ಡಿವಿಷನ್ ಉಪಾಧ್ಯಕ್ಷ ಅಬ್ದುಲ್ ರಶೀದ್ ವಗ್ಗ ಇವರ ಅಧ್ಯಕ್ಷತೆಯಲ್ಲಿ ಮಾವಿನಕಟ್ಟೆ ಮದ್ರಸ  ಹಾಲ್ ನಲ್ಲಿ ನಡೆಯಿತು. ಬಂಟ್ವಾಳ ಸೆಕ್ಟರ್ ಮಾಜಿ ಅಧ್ಯಕ್ಷರಾದ ಜಬ್ಬಾರ್ ಸಅದಿ ಮಾವಿನಕಟ್ಟೆ ಉದ್ಫಾಟನೆ ಮಾಡಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮನ್ಸೂರ್ ವಗ್ಗ ವರದಿ ಮತ್ತು ಲೆಕ್ಕ ಪತ್ರ ವಾಚಿಸಿದರು. ಇದೇ ಸಂಧರ್ಭ ಚುನಾವಣಾಧಿಕಾರಿಯಾಗಿ ಬಂದ ಡಿವಿಷನ್ ಉಪಾಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ಸಂಘಟನಾ ತರಗತಿ ಎಂಬ ವಿಷಯದಲ್ಲಿ ಮಾತನಾಡಿ ಎಸ್ಸೆಸ್ಸೆಫ್ ಸಂಘಟನೆಯಲ್ಲಿ ಕಾರ್ಯಾಚರಿಸುವುದು ಇಹಲೋಕದಲ್ಲಿ ಸ್ಥಾನ ಗಳಿಸುವುದಕ್ಕಲ್ಲ, ಪರಲೋಕದ ವಿಜಯಕ್ಕಾಗಿ. ನಮ್ಮ ಮರಣಾನಂತರವೂ ನಮಗಾಗಿ ತಹ್ಲೀಲ್ ಹೇಳುವ, ಕುರ್ ಆನ್ ಓದುವ, ದುವಾ ಮಾಡುವ ಒಂದು ಸಮೂಹವಿದ್ದರೆ ಅದು ಎಸ್ಸೆಸ್ಸೆಫ್ ಮಾತ್ರವಾಗಿದೆ ಎಂದು ಹೇಳಿದರು. ಹಳೇ ಸಮಿತಿಯನ್ನು ಬರ್ಕಾಸು ಮಾಡಿ ನೂತನ ಸಮಿತಿ ರೂಪಿಸಲಾಯಿತು.

ನೂತನ ಪದಾಧಿಕಾರಿಗಳು :
ಅಧ್ಯಕ್ಷ- ಮನ್ಸೂರ್ ವಗ್ಗ, ಉಪಾಧ್ಯಕ್ಷ- ಶಂಸೀರ್ ಕುಲಾಲ್, ಶರೀಫ್ ಮದನಿ ಮಾವಿನಕಟ್ಟೆ
ಪ್ರ.ಕಾರ್ಯದರ್ಶಿ  - ಹಾರಿಸ್ ಪೆರಿಯಪಾದೆ ಮತ್ತು ಜೊತೆ ಕಾರ್ಯದರ್ಶಿಗಳಾಗಿ:ಹಬೀಬ್ ಪೆರಾಳ,ಝಮೀರ್ ಪೆರಿಯಪಾದೆ ಇವರನ್ನು ಆಯ್ಕೆ ಮಾಡಲಾಯಿತು.
ಕ್ಯಾಂಪಸ್ ಕಾರ್ಯದರ್ಶಿಯಾಗಿ ಇರ್ಶಾದ್ ಪೆರಾಳ,ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಅಜಿಲಮೊಗರು ಹಾಗೂ 13 ಮಂದಿ ಕಾರ್ಯಾಕಾರಿ ಸದಸ್ಯರನ್ನು ಆಯ್ಕೆಮಾಡಲಾಯಿತು.
ಮನ್ಸೂರ್ ವಗ್ಗ ಸ್ವಾಗತಿಸಿ, ಹಾರಿಸ್ ಪೆರಿಯಪಾದೆ  ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News