ಬಂಟ್ವಾಳ : ಬೈಕ್ ಡಿಕ್ಕಿ - ಪಾದಚಾರಿ ಮೃತ್ಯು
Update: 2017-01-16 22:51 IST
ಬಂಟ್ವಾಳ,ಜ.16; ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ವೃದ್ಧರೊಬ್ಬರು ಮೃತಪಟ್ಟ ಘಟನೆ ಸೋಮವಾರ ರಾತ್ರಿ ಇಡ್ಕಿದು ಗ್ರಾಮದ ವಡ್ಯರ್ಪೆ ಎಂಬಲ್ಲಿ ನಡೆದಿದೆ. ಮೃತರನ್ನು ಇಲ್ಲಿಗೆ ಸಮೀಪದ ಉರಿಮಜಲು ನಿವಾಸಿ ರಾಮಣ್ಣ ಗೌಡ(70) ಎಂದು ಗುರುತಿಸಲಾಗಿದೆ. ಇವರು ಸೋಮವಾರ ಸಂಜೆ ಕೋಲ್ಫೆ ಸಮೀಪದ ತನ್ನ ಮಗಳ ಮನೆಯಿಂದ ಅಳಕೆಮಜಲು ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕೋಲ್ಪೆ ಕಡೆಗೆ ತೆರಳುತ್ತಿದ್ದ ತಮಿಳು ನಾಡು ನೋಂದಣಿಯ ಬೈಕೊಂದು ಪಿಕಪ್ ವಾಹನವನ್ನು ಹಿಂದಿಕ್ಕುವ ಭರದಲ್ಲಿ ರಾಮಣ್ಣ ಗೌಡರಿಗೆ ಡಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ಅವರ ಎದೆ ಹಾಗೂ ತಲೆಗೆ ಗಂಭೀರ ಗಾಯಗಳಾಗಿದ್ದು, ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.