ಅಲ್ ಬದ್ರಿಯಾ ಸಂಯುಕ್ತ ಪದವಿ ಪೂರ್ವ ಕಾಲೇಜು ವಾರ್ಷಿಕ ಕ್ರೀಡಾಕೂಟ
ಸುರತ್ಕಲ್, ಜ.16: ಕ್ರೀಡಾ ಪಟುಗಳ ಆಸಕ್ತಿಗೆ ತಕ್ಕದಾದ ಕ್ರೀಡೆಗೆ ಹೆಚ್ಚಿನ ಒತ್ತು ನೀಡಿ ಪ್ರೋತ್ಸಾಹಿಸಿದರೆ ರಾಜ್ಯ, ದೇಶ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ರಾಜ್ಯ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ ಹೇಳಿದರು.
ಕೃಷ್ಣಾಪುರ 7ನೆ ಬ್ಲಾಕ್‌ನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸೋಮವಾರ ನಡೆದ ಅಲ್ ಬದ್ರಿಯಾ ಸಂಯುಕ್ತ ಪದವಿ ಪೂರ್ವ ಕಾಲೇಜು ಮತ್ತು ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗಳ ವಾರ್ಷಿಕ ಕ್ರೀಡಾ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕ್ರೀಡಾ ಪಟುಗಳಿಗೆ ನೀಡಲಾಗುತ್ತಿರುವ ಪ್ರೋತ್ಸಾಹದ ಕೊರತೆಯಿಂದ ದೇಶ ಓಲಿಂಪಿಕ್ಸ್ ಗಳಂತಹಾ ಮಹತ್ವದ ಕ್ರೀಡಾ ಕೂಟಗಳಲ್ಲಿ ಸಧನೆ ಮಾಡಿ ಚಿನ್ನ, ಬೆಳ್ಳಿಯ ಪದಕ ಗಳಿಸುವಲ್ಲಿ ಹಿಂದುಳಿದಿದೆ ಎಂದ ಐವನ್, ಬದ್ರಿಯಾ ಸಂಯುಕ್ತ ವಿದ್ಯಾ ಸಂಸ್ಥೆ ಕ್ರೀಡಾ ಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಉತ್ತರ ವಲಯ ಶಾಸಕ ಮೊಯ್ದಿನ್ ಬಾವಾ, ಕೃಷ್ಣಾಪುರ ಸರಕಾರಿ ಹಿರಿಯ ಪ್ರಾತಮಿಕ ಶಾಲಾ ಮೈದಾನದಲ್ಲಿ ಸುಸಜ್ಜಿ ತ ಕ್ರೀಡಾಂಗಣ ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ ನಿಧರಿಸಲಾಗಿದೆ. ಆದರೆ, ಇದಕ್ಕೆ ಕೆಲವೊಂದು ಸ್ಥಳೀಯರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಕ್ರೀಡಾ ಪಟುಗಳ ಹಿತದೃಷ್ಟಿಯಿಂದ ವಿರೋಧಗಳ ನಡುವೆಯೂ ಮಾಡುವುದಾಗಿ ತಿಳಿಸಿದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕೀಡಾಪಟುಗಳ ತಯಾರಿ ನಡೆಯಬೇಕಿದೆ ಎಂದ ಬಾವಾ, 2 ಕೋಟಿ ರೂ. ವೆಚ್ಚದ ಈಜುಕೊಳ ಹಾಗೂ ಸಿಂಥೆಟಿಕ್ ಟ್ರಾಕ್ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಲ್ ಬದ್ರಿಯಾ ಎಜುಕೇಶನಲ್ ಅಸೋಸಿಯೇಶನ್‌ನ ಅಧ್ಯಕ್ಷ ಮುಹಮ್ಮದ್ ಶರೀಫ್ ಎಂ.ಎಸ್. ವಹಿಸಿದ್ದರು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಕ್ರೀಡಾ ಪಥ ಸಂಚಲನದ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದರು. ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಹರಿನಾಥ್ ಧ್ವಜಾರೋಹನ ಗೈದರು.
ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲು, ಭೂ ನ್ಯಾಯ ಮಂಡಳಿಯ ಅಶೋಕ್ ಕುಮಾರ್, ಬದ್ರಿಯಾ ಜುಮಾ ಮದಸೀದಿಯ ಅಧ್ಯಕ್ಷ ಉಸ್ಮಾನ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಮೀದ್ ಮುಖ್ಯ ಅತಿಥಿಗಲಾಗಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಮನರಂಜನೀಯ ಕವಾಯತುಗಳು ನಡೆದವು.