ಕ್ಯಾಂಪ್ಕೊ ಸದಸ್ಯರಿಂದ ಮಿತಿ ರಹಿತ ಅಡಿಕೆ ಖರೀದಿಗೆ ತೀರ್ಮಾನ

Update: 2017-01-16 17:31 GMT

ಮಂಗಳೂರು,ಜ.16 : ನವೆಂಬರ್ 8ನೆ ತಾರೀಖಿನಂದು ಕೇಂದ್ರ ಸರಕಾರವು ರೂ. 1000 ಮತ್ತು 500  ಮೌಲ್ಯದ ನೋಟಿನ ಅಪಮೌಲ್ಯ ಮಾಡಿದ ಹಿನ್ನೆಲೆಯಲ್ಲಿ ಅಡಿಕೆ ಮಾರುಕಟ್ಟೆಯ ದರದಲ್ಲಿ ಕುಸಿತವುಂಟಾಗುವ ಸಾಧ್ಯತೆ ಇದ್ದುದರಿಂದ ಮಾರುಕಟ್ಟೆ ಧಾರಣೆಯ ಸ್ಥಿರತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಕ್ಯಾಂಪ್ಕೊ ಸಂಸ್ಥೆಯು ದಿನಾಂಕ 10-11-2016  ರಿಂದ ತನ್ನ ಸದಸ್ಯರಿಂದ ಅಡಿಕೆ ಖರೀದಿಯನ್ನು ಪ್ರತಿ ಸದಸ್ಯರಿಂದ ಬ್ಯಾಂಕ್‌ಗಳ ನಿಯಮಗಳಿಗೆ ಸಮಾನಾಂತರದಲ್ಲಿ ವಾರವೊಂದರ ರೂ. 24000/-  ಮೌಲ್ಯದ ಖರೀದಿಯನ್ನು, ಆನಂತರ ದಿನಾಂಕ 9-1-2017ರಿಂದ ತಿಂಗಳೊಂದರ 5 ಕ್ವಿಂಟಾಲ್ ಖರೀದಿಯ ಮಿತಿಯನ್ನು ನಿಗದಿಗೊಳಿಸಿತ್ತು. ಸಂಸ್ಥೆಯ ಸದಸ್ಯರ ಅಹವಾಲು ಮತ್ತು ತೊಂದರೆಗಳನ್ನು ಮನಗಂಡು ಕ್ಯಾಂಪ್ಕೊ ಸಂಸ್ಥೆಯು ತನ್ನ ಈ ಮೇಲಿನ ಖರೀದಿ ಮಿತಿಯನ್ನು ಹಿಂತೆಗೆದುಕೊಂಡು ದಿನಾಂಕ 12-1-2017ರಿಂದ ಮಿತಿ ರಹಿತ ಖರೀದಿ ಮಾಡಲಾಗುವುದೆಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News