ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ
Update: 2017-01-17 00:12 IST
ಕೊಲ್ಲೂರು, ಜ.16: ಮುದೂರು ಗ್ರಾಮದ ಉದಯನಗರದ ಪಿ.ಜೆ. ಅಬ್ರಾಹಾಂ ಎಂಬವರ ಪುತ್ರ ಬಿಬಿನ್(29) ಎಂಬಾತ ಜ.15ರಂದು ಬೆಳಗ್ಗೆ ಮನೆಯಿಂದ ಕುಂದಾಪುರಕ್ಕೆ ಬಸ್ಸಿನಲ್ಲಿ ಹೋಗಿ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಇಳಿದವ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಇನ್ನೊಂದು ಪ್ರಕರಣದಲ್ಲಿ ಕೊಲ್ಲೂರು ಗ್ರಾಮದ ಮಾವಿನಕಾರು ನಿವಾಸಿ ನಾರಾಯಣ ಶೆಟ್ಟಿ ಎಂಬವರ ಮಗಳು ಚಂದ್ರಕಲಾ(21) ಎಂಬಾಕೆ ಜ.14ರಂದು ಮಾರಣಕಟ್ಟೆ ದೇವಸ್ಥಾನ ಜಾತ್ರೆಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದವಳು ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.