ಉತ್ತರಾಖಂಡದಲ್ಲಿ ಕಾಂಗ್ರೆಸ್‌ಗೆ ಆಘಾತ: ಬಿಜೆಪಿಗೆ ಹಾರಿದ ಸಚಿವ
ಡೆಹ್ರಾಡೂನ್, ಹ.17: ನಲ್ವತ್ತು ವರ್ಷ ಕಾಂಗ್ರೆಸ್‌ನಲ್ಲಿದ್ದು ಇದೀಗ ಉತ್ತರಾಖಂಡದ ನಿರಾವರಿ ಸಚಿವ ಯಶಪಾಲ್ ಆರ್ಯ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಸಂಜೀವ ಆರ್ಯರ ಜೊತೆ ಅವರು ಕಾಂಗ್ರೆಸ್‌ಗೆ ಸೋಡಾ ಚೀಟಿ ಬರೆದು ಬಿಜೆಪಿ ಸೇರಿ ಎಲ್ಲರನ್ನು ಆಶ್ಚರ್ಯಗೊಳಿಸಿ.ಹೊಸದಿಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉಪಸ್ಥಿತಿಯಲ್ಲಿ ಪಕ್ಷ ಸೇರಿದ ಬಳಿಕ ಮಾತಾಡಿದ ಆರ್ಯರು 40ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದೆ. ಒಬ್ಬ ಕಾರ್ಯಕರ್ತ ಎನ್ನುವ ನೆಲೆಯಲ್ಲಿ ಸೇವೆ ಮಾಡಿ ಈಗ ಕಾಂಗ್ರೆಸ್ ಭಾರವಾದ ಮನಸ್ಸಿನಲ್ಲಿ ರಾಜೀನಾಮೆ ಇತ್ತು ಬಿಜೆಪಿ ಸೇರಿದ್ದೇನೆ ಎಂದಿದ್ದಾರೆ.
ಮುಖ್ಯಮಂತ್ರಿ ಹರೀಶ್ ರಾವತ್‌ರನ್ನು ನೇರವಾಗಿ ಉದ್ಧರಿಸದೆ ಆರ್ಯರು, ಕೆಲವು ಸಮಯದಿಂದ ಸರಕಾರ ಹಾಗೂ ಪಕ್ಷ ಸ್ಥರದಲ್ಲಿ ತನ್ನನ್ನು ನಿರ್ಲಕ್ಷಿಸಲಾಗಿದೆ ಎಂದು ಆಕ್ರೋಶ ಪ್ರಕಟಿಸಿದರು. " ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಸುದೀರ್ಘ ಸಮಯದಲ್ಲಿ ಸಕ್ರಿಯವಾಗಿದ್ದರೂ ನನಗೆ ಕಾಂಗ್ರೆಸ್ ಸಮನ್ವಯ ಸಮಿತಿಯಲ್ಲಿ ಕೂಡಾ ಸ್ಥಾನ ನೀಡಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ತನ್ನ ಕ್ಷೇತ್ರದ ಕಾರ್ಯಕರ್ತರನ್ನು ಬಹಳ ಸಮಯದಿಂದ ನಿರ್ಲಕ್ಷಿಸಲಾಗುತ್ತಿದೆ.ಆದ್ದರಿಂದ ತನ್ನ ಮೌನವನ್ನು ದುರ್ಬಲ ವ್ಕಕ್ತಿ ಎಂದು ತಿಳಿಯಲಾಯಿತು. ಹೈಕಮಾಂಡ್ ಕೂಡಾ ನನ್ನ ಮಾತನ್ನು ಆಲಿಸಲಿಲ್ಲ. ಆದ್ದರಿಂದ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದೆ. ಆದರೆ ಆರ್ಯರು ಬಿಜೆಪಿಗೆ ನಿಶ್ಶರ್ತವಾಗಿ ಸೇರಿದ್ದಾರೆ. ’ತನಗಾಗಲಿ ತನ್ನ ಪುತ್ರನಾಗಲಿ ವಿಧಾನಸಭೆ ಟಿಕೆಟ್ ಕೇಳಿಲ್ಲ, ಕೇವಲ ಕಾರ್ಯಕರ್ತರಾಗಿ ಬಿಜೆಪಿ ಸೇರಿದ್ದೇವೆ’ ಎಂದು ಆವರು ಹೇಳಿದರೆಂದು ವರದಿಯಾಗಿದೆ.