×
Ad

ಸೌದಿ ಸಚಿವರ ಜೊತೆ ಕೇಂದ್ರ ಸಚಿವರ ಭೇಟಿಯಲ್ಲಿ ತಲೆಕೆಳಗಾಗಿತ್ತು ತ್ರಿವರ್ಣ ಧ್ವಜ !

Update: 2017-01-17 13:28 IST

ಹೊಸದಿಲ್ಲಿ, ಜ.17: ಕೇಂದ್ರ ಸಚಿವ ಪಿಯುಶ್ ಗೋಯೆಲ್ ಅವರು ಅಬುಧಾಬಿಯಲ್ಲಿ ಸೌದಿ ಇಂಧನ ಸಚಿವರೊಂದಿಗೆ ಕಳೆದ ವಾರ ಸಭೆಯೊಂದರಲ್ಲಿ ಭಾಗವಹಿಸಿದ್ದ ಸಂದರ್ಭ ಅಲ್ಲಿ ಭಾರತದ ತ್ರಿವರ್ಣ ತಲೆಕೆಳಗಾಗಿತ್ತೆಂಬ ವಿಷಯ ತಿಳಿದು ಬಂದಿದೆ. ಭಾರತದ ರಾಷ್ಟ್ರ ಧ್ವಜದ ಚಿತ್ರವಿರುವ ಡೋರ್ ಮ್ಯಾಟುಗಳನ್ನು ಮಾರಾಟ ಮಾಡುತ್ತಿದ್ದ ಅಮೆಝಾನ್ ಕೆನಡಾ ಘಟಕವನ್ನು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತರಾಟೆಗೆ ತೆಗೆದುಕೊಂಡು ಕ್ಷಮೆಯಾಚಿಸುವಂತೆ ಕೇಳಿದ ಕೆಲವೇ ದಿನಗಳಲ್ಲಿಈ ಘಟನೆ ಬೆಳಕಿಗೆ ಬಂದಿದೆ.

ಗೋಯೆಲ್ ಅವರು ರಿನಿವೇಬಲ್ ಎನರ್ಜಿ ಸಂಬಂಧಿತ ರೌಂಡ್ ಟೇಬಲ್ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಅಬುಧಾಬಿಗೆ ತೆರಳಿದ್ದು ಈ ಸಂದರ್ಭ ಅವರು ಸೌದಿ ಇಂಧನ ಸಚಿವ ಖಾಲಿದ್ ಅಲ್-ಫಾಲಿಹ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಸಭೆ ನಡೆಯುತ್ತಿದ್ದಾಗ ತೆಗೆಯಲಾದ ಫೋಟೋವನ್ನುಸೌದಿ ಪ್ರೆಸ್ ಏಜನ್ಸಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿತ್ತು. ಪಿಯುಶ್ ಗೋಯೆಲ್ ಸೌದಿ ಪರಿಸರ ಸಚಿವ ಥಾನಿ ಅಹಮದ್ ಅಲ್-ಝೆಯೋದಿ ಅವರನ್ನು ಭೇಟಿಯಾಗಿ ನಂತರ ಅಲ್ಲಿನ ಭಾರತೀಯರನ್ನುದ್ದೇಶಿಸಿ ಮಾತನಾಡಿದರು.

2015ರಲ್ಲಿ ಪ್ರಧಾನಿ ನರೇಂಧ್ರ ಮೋದಿ ಜಪಾನ್ ಪ್ರಧಾನಮಂತ್ರಿ ಶಿನ್ಝೋ ಅಬೆ ಅವರನ್ನು ಕೌಲಾಲಂಪುರದಲ್ಲಿ ನಡೆದ ಏಷ್ಯಾನ್ ಶೃಂಗ ಸಭೆಯ ಸಂದರ್ಭ ಭೇಟಿಯಾದಾಗಲೂ ಭಾರತದ ತ್ರಿವರ್ಣ ಧ್ವಜ ತಲೆಕೆಳಗಾಗಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News